Mahi - 35 in Kannada Love Stories by S Pr books and stories PDF | ಮಹಿ - 35

The Author
Featured Books
Categories
Share

ಮಹಿ - 35

   ಅಕಿರಾ ನೀಲಾ ರೂಮಿಂದ ಹೊರಗೆ ಬಂದಿದ್ದನ್ನ ನೋಡಿ ಹಾಲ್ ಅಲ್ಲಿ ಕೂತಿದ್ದವರೆಲ್ಲ ಅವರ ಕಡೆಗೆ ನೋಡಿದ್ರು. ತಾತ ಅಕಿರಾ ಕಡೆಗೆ ನೋಡಿ ಅಕಿರಾ ನೀಲಾ ಏನಮ್ಮ ನಿರ್ಧಾರ ಮಾಡಿದ್ರಿ ಅಂತ ಕೇಳಿದ್ರು. ಅಕಿರಾ ನಾವಿಬ್ರು ಮಹಿನೆ ಮದುವೆ ಮಾಡ್ಕೋಬೇಕು ಅಂತ ನಿರ್ಧಾರ ಮಾಡಿದ್ದೀವಿ ಅದ್ರೆ ಅಪ್ಪ ಅಮ್ಮ ಇದಕ್ಕೆ ಒಪ್ಕೋತಾರೋ ಇಲ್ವೋ ಗೊತ್ತಿಲ್ಲ ಅಂತ ಹೇಳಿದ್ಲು. ತಾತ ಅ ವಿಷಯ ನಾನು ಮಾತಾಡ್ತೀನಿ ನೀವು ಒಪಿಕೊಂಡ್ರಲ್ಲ ಅಷ್ಟು ಸಾಕು ಟೈಮ್ ಆಗಿದೆ ನಡೀರಿ ಊಟ ಮಾಡೋಣ ಅಂತ ಹೇಳಿದ್ರು. ಊಟ ಮಾಡೋವಾಗ ತಾತ ಶಿಲ್ಪಾ ನ ನೋಡಿ ಮದನ್ ಎಲ್ಲಿ ಹೋದ ಅಂತ ಕೇಳಿದ್ರು. ತಾತ ಮದನ್ ಮನೆಗೆ ಹೋದ ಊಟ ನ ಅಲ್ಲೇ ತಿಂತೀನಿ ಅಂತ ಹೇಳಿ ಹೋದ ಅಂತ ಹೇಳಿದ್ಲು. ಅಡುಗೆ ಮನೆಯಿಂದ ಬಾಕ್ಸ್ ತೆಗೆದು ಕೊಂಡು ಹೋಗ್ತಾ ಇದ್ದಾ ಅಜ್ಜಿ ನ ನೋಡಿ ರೋಹಿಣಿ ಅಜ್ಜಿ ನೀವು ಊಟ ಮಾಡಿ ನಾನ್ ಬಾಕ್ಸ್ ತಗೊಂಡು ಹೋಗ್ತೀನಿ ಅಂತ ಹೇಳಿದ್ಲು. ಅಜ್ಜಿ ಸರಿ ಅಂತ ಹೇಳಿ ಬಾಕ್ಸ್ ನ ಅಲ್ಲೇ ಟೇಬಲ್ ಮೇಲೆ ಇಟ್ಟು  ಊಟ ಮಾಡೋಕೆ ಹೋದ್ರು. ಸ್ವಲ್ಪ ಸಮಯದ ನಂತರ ಎಲ್ಲರೂ ಊಟ ಮಾಡಿ ಮುಗಿಸಿದ್ರು. ರೋಹಿಣಿ ಊಟದ ಬಾಕ್ಸ್ ನ ತಗೊಂಡು ಹೋಗ್ತಾ ಇರೋದನ್ನ ನೋಡಿ ಶಿಲ್ಪಾ ಇರೆ ನಾನು ಬರ್ತೀನಿ ಅಂತ ಹೇಳಿದ್ಲು. ನೀಲಾ ಕೂಡ ಅಕ್ಕ ನಾವು ಬರ್ತೀವಿ ಹಾಗೇ ವಾಕ್ ಮಾಡೋಣ ಅಂತ ಹೇಳಿ  ಅವರ ಜೊತೆಗೆ ಸೇರ್ಕೊಂಡ್ರು. ನಾಲಕ್ಕು ಜನ ಮದನ್ ಅವರ ಮನೆಗೆ ಬಂದ್ರು. ರೋಹಿಣಿ ಅತ್ತಿಗೆ ಪ್ಲೇಟ್ ತಗೋ ಬಾ ಅಂತ ಹೇಳಿದ್ಲು. ಶಿಲ್ಪಾ ಎರಡು ಪ್ಲೇಟ್ ನ ತೆಗೆದುಕೊಂಡು ರೋಹಿಣಿ ಹಿಂದೆ ಹೋದ್ಲು  ನೀಲಾ ಅಕಿರಾ ಕೂಡ ಅವರ ಹಿಂದೇನೆ ಹೋದ್ರು. 

  ನಾಲಕ್ಕು ಜನ ಟೆರೇಸ್ ಮೇಲೆ ಬಂದ್ರು. ರೋಹಿಣಿ  ನಡ್ಕೊಂಡು ಸೀದಾ ಮದನ್ ಇರೋ ಹತ್ತಿರ ಬಂದ್ಲು. ಮದನ್ ಕೂತು ಡ್ರಿಂಕ್ಸ್ ಮಾಡ್ತಾ ಇರೋದನ್ನ ನೋಡಿ ನೀಲಾ ಭಾವ ನೀನು ಒಬ್ಬನೇ ಇದ್ದಿಯಾ ಮಹಿ ಎಲ್ಲಿ ಹೋದ ಅಂತ ಕೇಳಿದ್ಲು. ಗೊತ್ತಿಲ್ಲ ನೀಲಾ ತಾತ ಮಾತಾಡ್ತಾ ಇರೋವಾಗಲೇ ಹೊರಟು ಹೋದ. ನಾನು ಇರೋ ಅಂತ ಹೇಳಿದ್ರು ಕೇಳಿಲ್ಲ  ಇವಾಗ ಕಾಲ್ ಮಾಡಿದ್ರೆ ಕನೆಕ್ಟ್ ಆಗ್ತಾ ಇಲ್ಲಾ, ಅವನ ಕಥೆ ಬಿಡಿ ಇವಾಗ ನೀವಿಬ್ರು ಏನ್ ನಿರ್ಧಾರ ಮಾಡಿದ್ರಿ ಅಂತ ಕೇಳ್ದ. ನೀಲಾ ಭಾವ ಅದು ಇಬ್ರು ಅವನನ್ನೇ ಮದುವೆ ಆಗಬೇಕು ಅಂತ ಇದ್ದಿವಿ ಅಂತ ಹೇಳಿದ್ಲು. ಮದನ್ ನಗ್ತಾ ಸೂಪರ್ ಒಳ್ಳೆ ನಿರ್ಧಾರ ಮಾಡಿದ್ದೀರಾ ಅದ್ರೆ ಅದು ಹೇಳಿದಷ್ಟು ಸುಲಭ ಅಲ್ಲ. ಶಿಲ್ಪಾ ಮದನ್ ಏನ್ ಹೀಗೆ ಹೇಳ್ತಾ ಇದ್ದಿಯಾ, ಇಬ್ಬರು ಒಬ್ಬನನ್ನೇ ಪ್ರೀತಿ ಮಾಡೋವಾಗ ಇಬ್ಬರು ಒಬ್ಬನನ್ನೇ ಮದುವೆ ಆಗೋದು ತಪ್ಪಾ, ಅವರ ಲೈಫ್ ಯಾರ್ ಜೊತೆ ಚೆನ್ನಾಗಿ ಇರುತ್ತೆ ಅಂತ ನಿರ್ಧಾರ ಮಾಡಿಕೊಳ್ಳೋ ಅಧಿಕಾರ ಅವರಿಗೆ ಇದೆ ಅಲ್ವಾ ಅಂತ ಕೇಳಿದ್ಲು. ಮದನ್ ನಿನ್ ಹೇಳೋದು ನಿಜ ಅವರ ಲೈಫ್ ನ ಅವರು ನಿರ್ಧಾರ ಮಾಡಿಕೊಳ್ಳೋ ಅಧಿಕಾರ ಇದೆ ಅದ್ರೆ. ಇಬ್ರು ಒಬ್ಬನನ್ನೇ ಲೈಫ್ ಅಂತ ನಿರ್ಧಾರ ಮಾಡಿಕೊಳ್ಳೋದು ತಪ್ಪು. ನಿನ್ನ ಫ್ರೆಂಡ್ ಗೆ ಅವನು ಬರ್ತಾ ಒಂದು ಸ್ಟೋರಿ ಹೇಳಿದ ಏನಕ್ಕೆ ಅಂತ ನಿನಗೆ ಗೊತ್ತಾ. ಭವಿಷ್ಯದಲ್ಲಿ ಅವರ ಬದುಕು ಹಾಗೇ ಆಗ್ಬಾರ್ದು ಅಂತ. 

   ಮಹಿ ಅಂತ ಹುಡುಗ ಸಿಗೋದು ಅಪರೂಪ ಅದ್ರೆ ಅ ದೇವರಿಗೆ ಅವನನ್ನ ಒಬ್ಬಂಟಿಯಾಗಿ ನೋಡೊದಕ್ಕೇನೆ ಇಷ್ಟ ಪಡ್ತಾ ಅಂತ ಕಾಣಿಸುತ್ತೆ ಅದಕ್ಕೆ ಅವನ ಲೈಫ್ ಇಬ್ಬರನ್ನ ತಂದು ಬಿಟ್ಟ. ಇವತ್ತು ಅವನು ಬೇಕು ಅಂತ ನೀವು ಈ ರೀತಿ ನಿರ್ಧಾರ ಮಾಡಿರಬಹುದು ಅದ್ರೆ ನಾಳೆ ದಿನ ಯಾವುದಾದ್ರೂ ಚಿಕ್ಕ ಭಿನ್ನಾಭಿಪ್ರಾಯ ಬಂದ್ರೆ, ಮೂರು ಜನರ ಲೈಫ್ ಹಾಳಾಗುತ್ತೆ. ಮಹಿ ಗೆ ಅಕಿರಾ ನೇ ಬೇಕು ಅಂತ ಅನ್ನಿಸಿದ್ದಿದ್ರೆ ಧ್ರುವ್ ಬಗ್ಗೆ ನಿಜ ಹೇಳಿ ಯಾವತ್ತೋ ಅವನಿಂದ ದೂರ ಮಾಡಿ ಅವಳ ಜೊತೆ ಇವನು ಹ್ಯಾಪಿ ಆಗಿ ಇರ್ಬೋದಿತ್ತು. ಇಲ್ಲಾ ನೀಲಾ ನೇ ಬೇಕು ಅಂತ ಅನ್ನಿಸಿದ್ದಿದ್ರೆ  ಅಕಿರಾ ಪ್ರೊಪೋಸ್ ಮಾಡಿದಾಗ ನೋ ಹೇಳಿ ನೀಲಾ ಜೊತೆ ಹ್ಯಾಪಿ ಆಗಿ ಇರ್ಬೋದಿತ್ತು. ಅದ್ರೆ ಅವನು ಇದ್ಯಾವುದು ಮಾಡಲಿಲ್ಲ. ನೀಲಾ ಗೆ ಅವನೇ ವಿಷಯ ಹೇಳಿ ಅರ್ಥ ಮಾಡಿಸಿದ. ಅದ್ರೆ ಅಕಿರಾ ಪರಿಸ್ಥಿತಿ ಹಾಗೇ ಇರಲಿಲ್ಲ ಅದಕ್ಕೆ ಅವನು ಅವನಿಗೆ ನೋ ಹೇಳೋಕೆ ಆಗದೆ ಇಲ್ಲಿಗೆ ಕರ್ಕೊಂಡು ಬಂದು ನಮಗೆ ವಿಷಯ ಹೇಳಿ ಅರ್ಥ ಮಾಡಿಸಿ ಅಂತ ಹೇಳಿದ್ದು. ತಾತ ಇಬ್ಬರು ನನ್ನ ಮೊಮ್ಮಕ್ಕಳೆ ಅಲ್ವಾ ಅಂತ ಈ ರೀತಿ ಹೇಳ್ದ. ಇವರು ಅವನೇ ಬೇಕು ಅಂತ ಒಂದೇ ನಿರ್ಧಾರಕ್ಕೆ ಬಂದ್ರು. ಮದನ್ ಅಕಿರಾ ನೀಲಾ ಕಡೆಗೆ ನೋಡ್ತಾ. ನಿಮಗೆ ಒಂದೇ ವಿಷಯ ಹೇಳ್ತಿನಿ. ಮಾತಲ್ಲಿ ಹೇಳಿದಷ್ಟು ಸುಲಭ ಅಲ್ಲ ಇಬ್ಬರ ಜೊತೆಗೆ ಜೀವನ. ಮೂರು ಜನ ಸಂತೋಷ ವಾಗಿ ಇರಬೇಕು ಅಂದ್ರೆ ದೂರಾನೇ ಇರಿ, ಸ್ವಲ್ಪ ದಿನ ಮನಸ್ಸಿಗೆ ನೋವಾಗಬಹುದು ಅದ್ರೆ ಲೈಫ್ ಲಾಂಗ್ ಹ್ಯಾಪಿ ಆಗಿ ಇರ್ತೀರ. ಇಲ್ಲಾ ಇಬ್ಬರು ಅವನೇ ಬೇಕು ಅಂತ ಅಂದ್ರೆ ಅವನೇ ನಿಮ್ಮಿಂದ ನಮ್ಮಿಂದ ದೂರ ಹೊರಟು ಹೋಗ್ತಾನೆ.  ಅರ್ಥ ಮಾಡಿಕೊಂಡು ಮುಂದೆ ಹೆಜ್ಜೆ ಇಟ್ರೆ ಎಲ್ಲರೂ ಸಂತೋಷ ವಾಗಿ ಇರಬಹುದು. ಕುಡಿದು ಇದ್ದಾನೆ ಇವನ ಮಾತು ಏನ್ ಕೇಳೋದು ಅಂತ ನಿಮಗೆ ಅನ್ನಿಸಿದ್ರೆ ದಯವಿಟ್ಟು ನನ್ನ ಕ್ಷಮಿಸಿ ಬಿಡಿ. ಅಂತ ಹೇಳಿ ಎದ್ದು ರೂಮ್ ಗೆ ಹೊರಟು ಹೋಗ್ತಾನೆ. ಶಿಲ್ಪಾ ರೋಹಿಣಿ ಗೆ ರೂಮ್ ಗೆ ಹೋಗೋಕೆ ಹೇಳಿ. ಅಕಿರಾ ನ ನೀಲಾ ನ ಕರ್ಕೊಂಡು ಅವಳ ರೂಮ್ ಗೆ ಬರ್ತಾಳೆ.

  ಅಕಿರಾ ಗೆ ನೀಲಾ ಗೆ ಮದನ್ ಮಾತಿಗೆ ಏನ್ ಹೇಳಬೇಕೋ ಅರ್ಥನೇ ಆಗೋದಿಲ್ಲ. ಅದ್ರೆ ಶಿಲ್ಪಾ ಗೆ ಮದನ್ ಹೇಳಿದ ಮಾತಲ್ಲಿ ಸತ್ಯ ಇದೆ ಅಂತ ಗೊತ್ತಾಯಿತು. ಅಕಿರಾ ನೀಲಾ ಇಬ್ಬರು ಬೆಡ್ ಮೇಲ್ ಮಲಗಿ ಅಳೋಕೆ ಶುರು ಮಾಡಿದ್ರು. ಹಾಗೇ ಅಳ್ತಾ ಅಳ್ತಾ ನಿದ್ದೆಗೆ ಜಾರಿದರು.

    ಮಾರನೇ ದಿನ ಬೆಳಿಗ್ಗೆ ಎದ್ದು ಅಕಿರಾ ಲಗೇಜ್ ಪ್ಯಾಕ್ ಮಾಡಿಕೊಂಡು ರೆಡಿ ಆಗೋದನ್ನ ನೋಡಿ ಶಿಲ್ಪಾ ಅಕಿರಾ ಏನ್ ಲಗೇಜ್ ಎಲ್ಲಾ ಪ್ಯಾಕ್ ಮಾಡ್ಕೋತ ಇದ್ದಿಯಾ ಅಂತ ಕೇಳಿದ್ಲು. ಅಕಿರಾ ಇಲ್ಲಾ ಶಿಲ್ಪಾ ನನ್ನ ಅಣೆಬರಹ ದಲ್ಲಿ ಪ್ರೀತಿ ಅನ್ನೋದೇ ನನಗೆ ಶಾಪ ಆಗೋಗಿದೆ. ಧ್ರುವ್ ಪ್ರೀತಿ ನ ನಿಜ ಅಂತ ನಂಬಿ ಮೋಸ ಹೋದೆ. ಮಹಿ ಪ್ರೀತಿ ನ ಅರ್ಥ ಮಾಡಿಕೊಳ್ಳದೆ ಅವನಿಗೆ ಅವಮಾನ ಮಾಡಿದೆ. ನನಗೆ ಧ್ರುವ್ ಮಾಡಿದ ಮೋಸಕಿಂತ ನಾನು ಮಹಿಗೆ ಮಾಡಿದ ಅವಮಾನ ನೇ ನನ್ನ ತುಂಬಾ ಕಾಡ್ತಾ ಇತ್ತು. ಮಹಿಗೆ ನನ್ನಾ ಮೇಲೆ ಇರೋ ಪ್ರೀತಿ ಅರ್ಥ ಆದಾಗ ಎಷ್ಟು ಖುಷಿಆಯ್ತು ಅಂತ ಅಂದ್ರೆ ಅವನ ಪ್ರೀತಿ ನ ಪಡೀಬೇಕು ಅನ್ನೋದಕ್ಕೆ ನನ್ನ ಬಗ್ಗೆ ನನ್ನ ಸುತ್ತ ಮುತ್ತ ಇದ್ದವರು ನನ್ನ ಎಷ್ಟೇ ಅವಮಾನ ಮಾಡಿದ್ರು ನನಗೆ ಕ್ಯಾರೆಕ್ಟರ್ ಇಲ್ಲಾ ಅಂತ ಅಂದ್ರು ತಡ್ಕೊಂಡೆ. ಯಾಕಂದ್ರೆ ಕೇವಲ ನಾನು ಹೆಲ್ಪ್ ಬೇಕು ಅಂತ ಕೇಳಿದ  ಒಂದೇ ಕಾರಣಕ್ಕೆ ಅಷ್ಟು ಜನರ ಮುಂದೆ ಮಹಿಗೆ ಅವಮಾನ ಆಗಿದ್ದರ ಮುಂದೆ ಇದೇನು ಅಲ್ವೇ ಅಲ್ಲ ಅಂತ ಅನ್ನಿಸ್ತು. ಕೇವಲ ನನ್ನ ಕಣ್ಣೀರನ್ನ ನೋಡಿ ವಿನೋದ್ ನ ಸಾಯಿಸೋಕೆ ಹೋದ. ನನ್ನಿಂದ ದೂರ ಇದ್ರು ನನ್ನ ಮೇಲೆ ಇಷ್ಟು ಪ್ರೀತಿ ಇಟ್ಕೊಂಡು ಇರೋ ಮಹಿ ನ ನೋಡಿ ಬದುಕಿದ್ರೆ ಇವನ ಜೊತೆ ನೇ ಅನ್ನೋ ನಿರ್ಧಾರ ಮಾಡಿ. ಅವನಿಗೆ ನನ್ನ ಪ್ರೀತಿ ನ ಹೇಳಿದೆ. ಅವನು ನನ್ನ ಪ್ರೀತಿ ನ ಪ್ರಶ್ನೆ ಮಾಡದೇ ಒಪ್ಪಿಕೊಂಡಾಗ ನನ್ನಷ್ಟು ಅದೃಷ್ಟವಂತ ಳು ಈ ಭೂಮಿ ಮೇಲೆ ಯಾರು ಇಲ್ಲಾ ಅಂತ ಅನ್ನಿಸ್ತು. ಅದ್ರೆ ಅದು ಅವತ್ತೇ ನನ್ನಿಂದ ದೂರ ಆಗುತ್ತೆ ಅಂತ ನನಗೆ ಅರ್ಥ ಆಗಲಿಲ್ಲ. ನನ್ನಿಂದ ಮಹಿ ಬಗ್ಗೆ ಏನು ತಿಳಿದೇ ಹೋದ್ರು ಅವನ ಒಳ್ಳೆ ತನನ ನೋಡಿ ಪ್ರೀತಿ ಮಾಡಿದ ನೀಲಾ ಪ್ರೀತಿ ಕೂಡ ಅವಳಿಗೆ ಸಿಗದೇ ಹೋಯ್ತು. ನಾನು ಅವರ ಮಧ್ಯ ಬರದೇ ಇದ್ದಿದ್ದರೆ ಮಹಿ ನೀಲಾ ಳಿಂದ ದೂರ ಆಗ್ತಾನೆ ಇರಲಿಲ್ಲ. ಅದಕ್ಕೆ ನಿರ್ಧಾರ ಮಾಡಿದ್ದೀನಿ ಮೂರನೇ ವ್ಯಕ್ತಿ ಆಗಿ ಮಧ್ಯದಲ್ಲಿ ಬಂದೆ ಮಧ್ಯದಲ್ಲೇ ಹೋಗ್ತೀನಿ. ಅಂತ ಅಳ್ತಾ ಹೇಳ್ತಾ ಲಗೇಜ್ ತಗೊಂಡು ರೂಮಿಂದ ಹೊರಗೆ ಹೋಗೋಕೆ ಹೋಗ್ತಾಳೆ.  ರೂಮ್ ಡೋರ್ ಹತ್ತಿರ ನೀಲಾ ಎದುರಿಗೆ ಬರ್ತಾ ಅಕಿರಾ ಗೆ ಅಡ್ಡ ನಿಲ್ತಾಳೆ. 

   ಅಕಿರಾ ನೀಲಾ ನ ನೋಡಿ ದಾರಿ ಬಿಡು ನೀಲಾ ಅಂತ ಹೇಳ್ತಾಳೆ. ನೀಲಾ ಅಕಿರಾ ಮುಖ ನೋಡ್ತಾ ಐಮ್ ಸಾರೀ ಅಕ್ಕ ಅಂತ ಹೇಳಿ ಅವಳ ಕೆನ್ನೆಗೆ ಒಂದು ಬಾರಿಸ್ತಾಳೆ. ಇದನ್ನ ನೋಡಿದ ಶಿಲ್ಪಾ ಗೆ ಶಾಕ್ ಓಡಿ ಬಂದು ಇಬ್ಬರ ಮಧ್ಯ ಬಂದು ನೀಲಾ ಕಡೆಗೆ ಕೋಪದಿಂದ ನೋಡ್ತಾ ಎ ಏನಕ್ಕೆ ಹೊಡೆದ ಅವಳನ್ನ ಅಂತ ಕೇಳ್ತಾಳೆ. ನೀಲಾ ಕೋಪದಿಂದ ಶಿಲ್ಪಾ ಕಡೆಗೆ ನೋಡ್ತಾ ಅಕ್ಕ ಇದು ನಮ್ಮಿಬ್ಬರ ಪರ್ಸನಲ್ ವಿಷಯ ನೀನು ಮಧ್ಯದಲ್ಲಿ ಬರದೇ ಇದ್ರೆ ನಿನಗೆ ಒಳ್ಳೇದು ಅಂತ ಸ್ವಲ್ಪ ಕಟುರವಾಗಿ ಹೇಳ್ತಾಳೆ. ನೀಲಾ ಈ ರೀತಿ ಮಾತಾಡೋದನ್ನ ಅ ಮನೇಲಿ ಯಾರು ಇದುವರೆಗೂ ನೋಡಲಿಲ್ಲ. ಅಜ್ಜಿ ಬಂದು ಶಿಲ್ಪಾ ನ ಪಕ್ಕಕ್ಕೆ ಬಾ ಅಂತ ಕರ್ಕೊಂಡು ಹೋಗ್ತಾಳೆ. ಅಕಿರಾ ಕೆನ್ನೆ ಮೇಲೆ ಕೈ ಇಟ್ಕೊಂಡು ಅಳ್ತಾ ಇರ್ತಾಳೆ. ಅಕಿರಾ ಅಳೋದನ್ನ ನೋಡಿ ನೀಲಾ, ನಿನಗೆ ತಾಳ್ಮೆ ಯಿಂದ ಯೋಚ್ನೆ ಮಾಡೋ ಬುದ್ದಿ ಇಲ್ವಾ, ಮಹಿ ಗೆ ನಮ್ ಮೇಲೆ ಪ್ರೀತಿ ಇಲ್ದೆ ನಮ್ಮಿಂದ ದೂರ ಆಗಿಲ್ಲ. ನಾವಿಬ್ರು ಎಲ್ಲಿ ಚಿಕ್ ಚಿಕ್ ವಿಷಯಕ್ಕೆ ಜಗಳ ಮಾಡ್ಕೊಂಡು ಉತ್ತರ ದಕ್ಷಿಣ ಆಗ್ತಿವಿ ಅನ್ನೋ ಭಯ ಬಿದ್ದು ನಮ್ಮಿಂದ ದೂರ ಇದ್ದಾನೆ ಅಷ್ಟೇ, ನಾವಿಬ್ರು ಅಂದ್ರೆ ಮಹಿ ಗೆ ತುಂಬಾ ಇಷ್ಟ ಕಣೆ ಅಕ್ಕ, ನಮ್ಮಿಬ್ಬರಲ್ಲಿ ಯಾರಿಗಾದ್ರೂ ಒಬ್ಬರಿಗೆ ನೋವಾದ್ರೂ ಅವನು ತಡಕೊಳ್ಳೋದಿಲ್ಲ. ಇಲ್ಲಿ ಇರೋವ್ರು ಯಾರು ನಮ್ ಪ್ರೀತಿ ಗೆ ವಿರೋಧಿಗಳು ಅಲ್ಲ. ನೆನ್ನೆ ನಾನ್ ಹೇಳಿದ್ದನ್ನ ಕೇಳಿ ಅರ್ಥ ಮಾಡಿಕೊಂಡು ಒಪ್ಪಿಕೊಂಡೆ. ಮದನ್ ಹೇಳಿದ್ದನ್ನ ಕೇಳಿ ಅಳ್ತಾ ಈಗ ಈ ನಿರ್ಧಾರಕ್ಕೆ ಬಂದಿದ್ದೀಯಾ. ಈ ರೀತಿ ಬೇರೊಬ್ಬರ ಮಾತಿನ ಮೇಲೆ ನಾವು ನಿರ್ಧಾರಗಳನ್ನ ತಗೊಂಡು ನಮ್ಮ ಆಲೋಚನೆಗಳನ್ನ ನಮ್ಮ ನಿರ್ಧಾರಗಳನ್ನ ಬದಲಾಯಿಸಿ ಕೊಳ್ಳಬಾರದು. ಸಾವಿರ ಜನ ಸಾವಿರ ಹೇಳಿದ್ರು ನಾವಿಬ್ರು ಒಂದೇ ನಿರ್ಧಾರದ ಮೇಲೆ ಇರ್ತೀವಿ ಸಂತೋಷವಾಗಿ ಜೀವನ ಮಾಡ್ತೀವಿ ಅನ್ನೋ ನಂಬಿಕೆ ಅವನಿಗೆ ಕೊಟ್ರೆ. ನಮ್ಮಿಬ್ಬರನ್ನ ಚೆನ್ನಾಗಿ ನೋಡ್ಕೋತಾನೆ. ಅವರು ಇವರು ಹೇಳಿದ್ರು ಅಂತ ನಾವು ದಿನಕ್ಕೊಂದು ರೀತಿ ಬದಲಾಗ್ತಾ ಇದ್ರೆ. ಸತ್ಯವಾಗ್ಲೂ ಹೇಳ್ತಿನಿ ಮಹಿ ಮುಖ ನ ನಾವು ಸತ್ರು ನೋಡೋದಕ್ಕೆ ಆಗೋದು ಇಲ್ಲಾ. ನೆನ್ನೆನೇ ನಾನು ಕ್ಲಿಯರ್ ಆಗಿ ಹೇಳಿದ್ದೀನಿ ಅದ್ರೆ ನೀನು ಕೇಳಿಲ್ಲ ಅದಕ್ಕೆ ಈಗ ಈ ರೀತಿ ಬುದ್ದಿ ಹೇಳಿದ್ದೀನಿ ಇದಕ್ಕೂ ಮೇಲೆ ನಿನಗೆ ಹೋಗಬೇಕು ಅಂತ ಅನ್ನಿಸಿದ್ರೆ. ನಿನ್ನ ಬೆಂಗಳೂರಿಂದ ಕರ್ಕೊಂಡು ಬಂದವನೇ ವಾಪಸ್ಸು ಕರ್ಕೊಂಡು ಹೋಗ್ತಾನೆ. ಬೆಂಗಳೂರಿಗೆ ಹೋಗಿ ನಿಮ್ ಅಪ್ಪ ಅಮ್ಮ ನ ಹತ್ತಿರ ಹೋದಮೇಲೆ ನಿನ್ನಿಷ್ಟ ಏನಾದ್ರು ಮಾಡ್ಕೋ. ನಿನ್ನ ನೋಡಿದ್ರೆ ಅಲ್ಲಿಗೆ ಹೋದ ತಕ್ಷಣ ಯಮನ ಪಾದ ಸೇರೋ ಪ್ಲಾನ್ ಮಾಡಿಕೊಂಡ ಹಾಗೇ ಇದೆ. ಆಲ್ ದಿ ಬೆಸ್ಟ್. ಅದ್ರೆ ಚಿಕ್ಕವಳಾಗಿ ನಿನಗೆ ಒಂದೇ ಒಂದು ಮಾತು ಹೇಳ್ತಿನಿ ಕೇಳಿಸ್ಕೊ. ನಾವಿಬ್ರು ಸೇರಿ ಕೊಡೊ ಪ್ರೀತಿ ಗೆ ಹತ್ತರಷ್ಟು ಪ್ರೀತಿನ ಮಹಿ ನಮಗೆ ಕೊಡ್ತಾನೆ. ನಿನಗೆ ಅವನ ಪ್ರೀತಿ ಬೇಕು ಅಂತ ಅಂದ್ರೆ ಗಾಳಿ ಮಾತಿಗೆ ಗೋಲಿ ಹೊಡಿ. ಇಲ್ಲಾ ಅಂದ್ರೆ ನಿನ್ನ ಪ್ಲೇಸ್ ಗೆ ಇನ್ನೊಬ್ಬಳು ಬರ್ತಾಳೆ. ಮೊದಲೇ ಅವನಿಗೆ ಆಫೀಸ್ ಫ್ಯಾಕ್ಟರಿ ಅಲ್ಲಿ ಹುಡುಗೀರ ಫಾಲೋಯಿಂಗ್ ಜಾಸ್ತಿ ಇದೆ. ಮಾಲ್ ಗೆ ಹೋಗಿದ್ದೆ ಅಲ್ವಾ ಅಲ್ಲೇ ಗೊತ್ತಾಗಿರಬೇಕು ನಿನಗೆ. ಇದರ ಮೇಲೆ ನಿನ್ನಿಷ್ಟ ಅಂತ ಹೇಳಿ ಸೈಲೆಂಟ್ ಆಗ್ತಾಳೆ.

  ಅಕಿರಾ ನೀಲಾ ನ ಗಟ್ಟಿಯಾಗಿ ಅಪ್ಪಿಕೊಂಡು ಅಳ್ತಾ ಸಾರೀ ನೀಲಾ ನನಗೆ ಮಹಿ ಬೇಕು ಅಂತ ಹೇಳ್ತಾ ಅಳ್ತಾಳೆ. ನೀಲಾ ಅಕಿರಾ ನ ಸಮಾಧಾನ ಮಾಡ್ತಾ ಮಹಿ ಬೇಕು ಅಂತ ಇಲ್ಲಿ ನಿಂತು ಅಳ್ತಾ ನಿಂತ್ರೆ ಎಲ್ಲಿ ಬರ್ತಾನೇ. ಬೇಗ ಹೋಗಿ ರೆಡಿ ಆಗು ಫ್ಯಾಕ್ಟರಿ ಗೆ ಹೋಗೋಣ ಅಲ್ಲಿ ಸಿಗ್ತಾನೆ ನಮ್ ರಾಜಕುಮಾರ ಅಂತ ಹೇಳ್ತಾಳೆ.  ಇದನ್ನೆಲ್ಲಾ ನೋಡ್ತಾ ಇದ್ದಾ ಶಿಲ್ಪಾ ಅಜ್ಜಿ ಏನಜ್ಜಿ ಇವರು ಅಂತ ಕೇಳ್ತಾಳೆ. ಅಜ್ಜಿ ಮಹಿಗೆ ಇವರಿಬ್ಬರು ಸಂತೋಷವಾಗಿ ಇರೋದು ಬೇಕು. ಅದಕ್ಕೆ ಮೊದಲು ಇವರಿಬ್ಬರು ಅವರನ್ನ ಅವರು ಅರ್ಥ ಮಾಡಿಕೊಂಡ್ರೆ ಮೂರನೇ ವ್ಯಕ್ತಿ ಬಂದು ಮಾತಾಡೋ ಅವಕಾಶ ಇರೋದಿಲ್ಲ ಮನಸ್ತಾಪ ಆಗೋದಿಲ್ಲ ಅಂತ ಅರ್ಥ ಮಾಡಿಸ್ತಾ ಇದ್ದಾನೆ. ನಿನಗೆ ಅವಳು ತಂಗಿ ನೇ ಆಗಿರ ಬಹುದು ಅದ್ರೆ ಇನ್ಮೇಲೆ ಸ್ವಲ್ಪ ಹುಷಾರು. ಹೋಗಿ ರೆಡಿ ಆಗು ಫ್ಯಾಕ್ಟರಿ ಗೆ ಹೋಗಬೇಕು ಅಂತ ಹೇಳಿ ಶಿಲ್ಪಾ ನ ಅವಳ ರೂಮ್ಗೆ ಕಳಿಸ್ತಾರೆ ಅಜ್ಜಿ.. 

     ಎಲ್ಲರೂ ರೆಡಿ ಆಗಿ ತಿಂಡಿ ತಿಂದು ಫ್ಯಾಕ್ಟರಿ ಗೆ ಹೋಗೋಣ ಅಂತ ಹೊರಗೆ ಬರ್ತಾರೆ. ಒಂದು ಕಾರ್ ಅಲ್ಲಿ ಶಿಲ್ಪಾ ಅಜ್ಜಿ ತಾತ ಚಿಕ್ಕಮ್ಮ ಚಿಕ್ಕಪ್ಪ, ಇನ್ನೊಂದು ಕಾರ್ ಅಲ್ಲಿ ಮದನ್ ರೋಹಿಣಿ ಅವರ ಅಪ್ಪ ಅಮ್ಮ. ಹೊರಟು ಹೋಗ್ತಾರೆ. ಅಕಿರಾ ನೀಲಾ ಕಡೆಗೆ ನೋಡಿ ನಾವು ಯಾವುದರಲ್ಲಿ ಹೋಗೋದು ಅಂತ ಕೇಳ್ತಾಳೆ. ನೀಲಾ ಬಾ ಸಿಸ್ಟರ್ ಅಂತ ಹೇಳಿ ಕೈ ಇಡಿದು ಕರ್ಕೊಂಡು ಕಾರ್ ಶೆಡ್ ಹತ್ತಿರ ಹೋಗ್ತಾಳೆ. ಅಲ್ಲಿ   ರೆಡಿ ಅಂಡ್ ಬ್ಲಾಕ್ ಕಲರ್ ಮೋಡಿಫೈಡ್ ಓಪನ್ ಜೀಪ್ ಕಾಣಿಸುತ್ತೆ. ಅಕಿರಾ ಅ ಕಾರ್ ನ ನೋಡಿ ಆಶ್ಚರ್ಯ ವಾಗಿ ನೀಲಾ ಕಡೆಗೆ ನೋಡ್ತಾಳೆ. ನೀಲಾ ನಮ್ ಮಹಿ ಕಾರ್ ಮೈಸೂರ್ ಅಲ್ಲಿ ಓಡಾಡೋಕೆ ಅಂತ ರೆಡಿ ಮಾಡಿಸಿದ್ದ. ನಿನಗೆ ಕಾರ್ ಡ್ರೈವ್ ಮಾಡೋಕೆ ಬರುತ್ತಾ ಅಂತ ಕೇಳಿದ್ಲು. ಅಕಿರಾ ಬರುತ್ತೆ ಅಂತ ಹೇಳಿದ್ಲು. ಸರಿ ಕೀ ತಗೋ ನೀನೇ ಡ್ರೈವ್ ಮಾಡು ಅಂತ ಹೇಳಿ ಕಾರ್ ಕೀ ಕೊಡ್ತಾಳೆ. ಅಕಿರಾ ಖುಷಿಯಾಗಿ ಕಾರ್ ಸ್ಟಾರ್ಟ್ ಮಾಡ್ತಾಳೆ. ನೀಲಾ ನಾನ್ ದಾರಿ ಹೇಳ್ತಿನಿ ನಡಿ ಅಂತ ಇಬ್ಬರು ಫ್ಯಾಕ್ಟರಿ ಕಡೆಗೆ ಹೋಗ್ತಾರೆ.

   ದಾರಿಲಿ ಹೋಗ್ತಾ, ಅಕ್ಕ ನಿನಗೆ ಮಹಿ ಅವರ ಅಪ್ಪ ಅಮ್ಮ ಗೊತ್ತ ಅಂತ ಕೇಳ್ತಾಳೆ. ಅಕಿರಾ ತಮ್ಮನ ಹಾಗೇ ಡ್ರಾಮಾ ಮಾಡಿದ ಸ್ಟೋರಿ ಹೇಳ್ತಾಳೆ. ನೀಲಾ ನಗ್ತಾ ಸರಿಯಾಗಿ ಬಕ್ರ ಮಾಡಿದ ನಿನ್ನ. ಬಾ ಇವತ್ತು ಅವನ ಇಡೀ ಫ್ಯಾಮಿಲಿ ನ ಪರಿಚಯ ಮಾಡಿಸ್ತೀನಿ.ಅವನ ಫ್ಯಾಮಿಲಿ ಎಷ್ಟು ಸ್ವೀಟ್ ಅಂತ ಅಂದ್ರೆ ದುಡ್ಡಿದೆ ಅನ್ನೋ ಸ್ವಲ್ಪ ಅಹಂ ಕೂಡ ಯಾರಿಗೂ ಇಲ್ಲಾ ಅಕ್ಕ. ಮಹಿ ಅಂತು ಅಜ್ಜಿನ ಗರ್ಲ್ಫ್ರೆಂಡ್ ತರ ಕರೀತಾನೆ ಬಿಟ್ರೆ ಇನ್ನೆಲ್ಲರನ್ನು ಅಮ್ಮ ಅಣ್ಣ ಅಂತ ತುಂಬಾ ಗೌರವದಿಂದ ಮಾತಾಡಿಸ್ತಾನೆ. ಅವನದ್ದೇ ಒಂದು ಗ್ಯಾಂಗ್ ಇದೆ ಮನೇಲಿ. ತಂಗಿರು ತಮ್ಮಂದಿರು ಇದ್ದಾರೆ ಎಷ್ಟು ಗೊಳಾಡಿಸ್ತಾನೆ ಅಂದ್ರೆ, ಪಾಪ ಲಾಸ್ಟ್ ಟೈಮ್ ಹೋದಾಗ ಇವನ ಬಗ್ಗೆ ದೊಡ್ಡ ಕಂಪ್ಲೇಂಟ್ ಲಿಸ್ಟ್ ನ ಹೇಳಿದ್ರು. ಇವಾಗ ನಿನ್ ಬಂದೆ ಅಲ್ವಾ ಇನ್ನ ಹಬ್ಬ ನೇ ಅವರಿಗೆ. ಅಂತ ಹೇಳ್ತಾ ಮಾತಾಡ್ಕೊಂಡು ಫ್ಯಾಕ್ಟರಿ ಗೆ ಬರ್ತಾರೆ.


***************************************

P. S