ಸಂಜೆ ಕಾಲೇಜ್ ಮುಗಿದ ಮೇಲೆ ಸೀತಾ ನನ್ನ ನೋಡಿ ಮಹಿ ಅವರೇ ಹೊರಡೋಣವಾ ಅಂತ ಕೇಳಿದ್ಲು. ನಾನು ಸೀತಾ ಕಡೆಗೆ ನೋಡಿ ನಿಮ್ ಮನೆ ಅಡ್ರೆಸ್ ಕೊಟ್ಟು ಹೋಗಿ ನಾನು ಹಾಸ್ಟೆಲ್ ಗೆ ಹೋಗಿ ಫ್ರೆಶ್ ಅಪ್ ಆಗಿ ಬರ್ತೀನಿ ಅಂತ ಹೇಳ್ದೆ. ಸೀತಾ,,, ನೀವು ಹೋಗಿ ಫ್ರೆಷ್ ಅಪ್ ಆಗಿ ಟ್ಯಾಕ್ಸಿ ಆಟೋ ಇಡ್ಕೊಂಡು ಬರೋ ಅಷ್ಟೋತ್ತಿಗೆ ರಾತ್ರಿ ಆಗಿರುತ್ತೆ. ನನ್ನ ನಂಬರ್ ತಗೋಳಿ ನೀವು ರೆಡಿ ಆಗಿ ನನಗೆ ಕಾಲ್ ಮಾಡಿ ನನಗೆ ಹೊರಗಡೆ ಸ್ವಲ್ಪ ಕೆಲಸ ಇದೆ ನೀವು ರೆಡಿ ಆಗಿ ಬರೋ ಅಷ್ಟರಲ್ಲಿ ಹೋಗಿ ಬರ್ತೀನಿ ಅಂತ ಹೇಳಿದ್ಲು. ನನ್ನಿಂದ ನಿಮಗೆ ಏನಕ್ಕೆ ತೊಂದ್ರೆ ನೀವು ಆರಾಮಾಗಿ ಹೋಗಿ ನಾನು ಬರ್ತೀನಿ ಅಂತ ಹೇಳ್ದೆ. ಸೀತಾ,, ನನ್ನ ಮಾತಿಗೆ ಕೋಪ ಮಾಡ್ಕೊಂಡು ಹೌದ ಸರ್ ಸರಿ ಹೋಗಿ ನಿಮ್ ಇಷ್ಟ ಅಂತ ಹೇಳಿ ಡ್ರೈವರ್ ಗೆ ಕಾರ್ ತೆಗಿಯೋಕೆ ಹೇಳಿ ಬೈ ಕೂಡ ಹೇಳದೆ ಕಾರ್ ಅಲ್ಲಿ ಕುಳಿತುಕೊಂಡು ಅಲ್ಲಿಂದ ಹೊರಟು ಹೋದಳು...
ಸೀತಾ ಹಾಗೇ ಹೊರಟು ಹೋದಮೇಲೆ ನಾನು ಹಾಸ್ಟೆಲ್ ಕಡೆಗೆ ನಡ್ಕೊಂಡು ಹೋಗ್ತಾ. ಸೀತಾ ಅವರ ಫ್ಯಾಮಿಲಿ ಬಗ್ಗೆ ಯೋಚ್ನೆ ಮಾಡ್ತಾ ಹೋದೆ, ಅಲ್ಲ ಪರಿಚಯ ಆಗಿ ಮೂರು ದಿನ ಆಗಿಲ್ಲ ಆಗಲೇ ಅವಳು ನನ್ನ ಬಗ್ಗೆ ಮನೇಲಿ ಹೇಳಿದ್ದಾಳೆ. ಓಕೆ ಕನ್ನಡದವರು ಅಭಿಮಾನ ಅಂತ ಹೇಳಿರಬಹುದು, ಅದ್ರೆ ಅವರ ಅಪ್ಪ ಅಮ್ಮ ತಾತ ನನ್ನ ಮನೆಗೆ ಬರೋಕೆ ಏನಕ್ಕೆ ಹೇಳಿದ್ರು. ಹೋಗೋದ ಬೇಡ್ವಾ? ಅಂತ ಯೋಚ್ನೆ ಮಾಡ್ತಾ ಕೊನೆಗೆ ಹೋಗೋಣ ಅಷ್ಟು ಪ್ರೀತಿ ಯಿಂದ ಕರೆದಾಗ ಹೋಗದೆ ಇದ್ರೆ ತಪ್ಪಾಗುತ್ತೆ ಅಂತ ನಿರ್ಧಾರ ಮಾಡಿ, ಹಾಸ್ಟೆಲ್ ಗೆ ಹೋದೆ. ಹೋಗಿ ಫ್ರೆಷ್ ಅಪ್ ಆಗಿ ಬಟ್ಟೆ ಬದಲಾಯಿಸಿ ಕೊಂಡು. ರೆಡಿ ಆಗಿ ಮೊಬೈಲ್ ನ ಕೈಲಿ ಇಡ್ಕೊಂಡು ಹಾಸ್ಟೆಲ್ ಗೇಟ್ ಹತ್ತಿರ ಬಂದೆ. ಹಾಸ್ಟೆಲ್ ಸೆಕ್ಯೂರಿಟಿ, ಮಹಿ ಅಂತ ಕರೆದ. ನಾನು ಹೇಳು ಭಾಯ್ ಅಂತ ಹತ್ತಿರ ಹೋದೆ.ಸೆಕ್ಯೂರಿಟಿ ಮಹಿ ನಿನಗೋಸ್ಕರ ಯಾರೋ ಕಾಯ್ತಾ ಇದ್ದಾರೆ ನೋಡಿ ಅಂತ ಹೇಳಿದ್ರು. ನಾನು ಯಾರಪ್ಪ ಅಂತ ಅನ್ಕೊಂಡು ಗೇಟ್ ಯಿಂದ ಹೊರಗೆ ಬಂದು ರೋಡ್ ಸೈಡ್ ನೋಡಿದೆ. ಸೀತಾ ಅವರ ಕಾರ್ ಡ್ರೈವರ್ ಸರ್ ಅಂತ ಕರೆದ್ರು. ನಾನು ಅವರ ಹತ್ತಿರ ಹೋದೆ. ಸೀತಾ ಕಾರ್ ಒಳಗೆ ಕೂತಿದ್ಲು. ನಾನ್ ಅವಳ ಮುಖ ನೋಡಿದೆ ಕೋಪ ಮಾಡ್ಕೊಂಡು ಇದ್ಲು. ಡ್ರೈವರ್ ಸರ್ ಬನ್ನಿ ಹೋಗೋಣ ಅಂತ ಹೇಳಿದ. ನಾನು ಡ್ರೈವರ್ ಕಡೆಗೆ ನೋಡಿ ಎಲ್ಲಿಗೆ ಸರ್ ನಿಮ್ ಮನೆಗ ಅಂತ ಕೇಳಿದೆ. ಏನ್ ಸರ್ ನೀವು ತಮಾಷೆ ಮಾಡ್ಕೊಂಡು ನೀವು ಬರ್ತೀರಾ ಅಂತ ಮೇಡಂ ಎಲ್ಲೂ ಹೋಗದೆ ನಿಮಗೋಸ್ಕರ ಕಾಯ್ತಾ ಇದ್ದಾರೆ. ನೀವು ನೋಡಿದ್ರೆ ನಮ್ ಮನೆಗ ಅಂತ ಕೇಳ್ತಾ ಇದ್ದೀರಾ. ಬನ್ನಿ ಸರ್ ಅಂತ ಹೇಳಿದ್ರು. ನಾನು ಸುಮ್ನೆ ತಮಾಷೆ ಮಾಡಿದೆ. ನೀವು ಕೂತ್ಕೊಳ್ಳಿ ನಾನೆ ಕಾರ್ ಡ್ರೈವ್ ಮಾಡ್ತೀನಿ ಅಂತ ಹೇಳ್ದೆ. ಡ್ರೈವರ್ ಸರ್ ಬೇಡ ದೊಡ್ಡ ಯಜಮಾನ್ರು ನೋಡಿದ್ರೆ ನನ್ನ ಬೈತಾರೆ ಅಂತ ಹೇಳಿದ್ರು. ಅವರು ಕೇಳಿದ್ರೆ. ನಾನ್ ಹೇಳ್ತಿನಿ ಬಿಡಿ ಅಂತ ಹೇಳಿ ಅವರನ್ನ ಮುಂದೆ ಕೂರಿಸಿ ನಾನು ಡ್ರೈವಿಂಗ್ ಸೀಟ್ ಅಲ್ಲಿ ಹೋಗಿ ಕೂತ್ಕೊಂಡು ಕನ್ನಡಿ ಅಲ್ಲಿ ಹಿಂದೆ ಕೂತಿರೋ ಸೀತಾ ಕಡೆಗೆ ನೋಡಿದೆ ಸೀತಾ ಕೋಪದಿಂದ ನನ್ನೇ ನೋಡ್ತಾ ಇದ್ಲು. ನಾನು ಅವಳನ್ನ ನೋಡಿ ಕಣ್ ಹೊಡೆದೆ. ತಕ್ಷಣ ಬೇರೆ ಕಡೆಗೆ ನೋಡಿ ಯಾರಿಗೂ ಕಾಣದ ಹಾಗೇ ಒಂದು ಸ್ಮೈಲ್ ಮಾಡಿದ್ಲು. ನಾನು ನಗ್ತಾ ಕಾರ್ ಸ್ಟಾರ್ಟ್ ಮಾಡಿದೆ ಡ್ರೈವರ್ ಸರ್ ದಾರಿ ಹೇಳ್ತಾ ಹೋದ್ರು. ನಾನು ಡ್ರೈವ್ ಮಾಡ್ತಾ ಮಧ್ಯ ಮಧ್ಯ ದಲ್ಲಿ ಕನ್ನಡಿಲಿ ಹಿಂದೆ ಕೂತಿರೋ ಸೀತಾ ನ ನೋಡ್ತಾ ಡ್ರೈವರ್ ಜೊತೆಗೆ ಮಾತಾಡ್ತಾ ತಮಾಷೆ ಮಾಡ್ಕೊಂಡು ಹೋಗ್ತಾ ಇದ್ದೆ. ಸೀತಾ ನಾವು ತಮಾಷೆ ಮಾಡ್ತಾ ಮಾತಾಡೋದನ್ನ ಕೇಳಿಸಿಕೊಂಡು ಒಬ್ಬೊಬ್ಬಳೇ ನಗ್ತಾ ಇದ್ಲು. ಹೀಗೆ ಮಾತಾಡೋಕೊಂಡು ಸೀತಾ ಅವರ ಮನೆ ಹತ್ತಿರ ಬಂದ್ವಿ.
ಮೂರು ಜನ ಕಾರ್ ಇಳಿದ್ವಿ. ನಾನು ಕಾರ್ ಇಳಿದು ಸೀತಾ ಅವರ ಮನೆ ನೋಡಿದೆ 3 ಫ್ಲೋರ್ ಇರುವ ಬಿಲ್ಡಿಂಗ್ ಸ್ವಲ್ಪ ದೊಡ್ಡದಾಗಿ, ನೋಡೋಕು ಚೆನ್ನಾಗಿ ಇತ್ತು. ನಾನು ಡ್ರೈವರ್ ಕಡೆಗೆ ನೋಡಿ ಪರ್ವಾಗಿಲ್ಲ ಸರ್ ನಿಮ್ ಸರ್ ಒಳ್ಳೆ ಮನೇನ ಕಟ್ಟಿದ್ದಾರೆ ಅಂತ ಹೇಳ್ದೆ. ಸೀತಾ ಕಟ್ಟಿದ್ದು ಕೆಲಸದವರು ಕಟ್ಟಿಸಿದ್ದು ನಮ್ ತಾತ ಅಂತ ನನಗೆ ಪಂಚ್ ಡೈಲಾಗ್ ಹೊಡೆದ್ಲು. ಡ್ರೈವರ್ ಗೆ ಭಾಷೆ ಅರ್ಥ ಆಗದೆ ಇದ್ರು ಪಂಚ್ ಡೈಲಾಗ್ ಅಂತ ಗೊತ್ತಾಗಿ ಅವರು ನಕ್ಕಿದ್ರು. ನಾನು ಸೀತಾ ಕಡೆಗೆ ನೋಡಿದೆ. ಸೀತಾ ನನ್ನ ನೋಡಿ ಸಾಕು ನೋಡಿದ್ದು ಬನ್ನಿ ಮನೆ ಒಳಗೆ ಅಂತ ಹೇಳಿ ಮುಂದೆ ಹೋದ್ಲು. ನಾನು ಮನಸಲ್ಲೇ ಮಹಿ ಸೀತಾ ಅನ್ನೋ ಹೆಸರಿದೆ ಅಂತ ಸೈಲೆಂಟ್ ಅನ್ಕೋಬೇಡ, ಹುಷಾರು ಅಂತ ಅನ್ಕೊಂಡು, ಅವಳ ಹಿಂದೇನೆ ಹೋದೆ. ಇಬ್ಬರು ಮನೆ ಒಳಗೆ ಹೋಗ್ತಾ ಇದ್ದಾ ಹಾಗೇ ಹಾಲ್ ಅಲ್ಲಿ ಒಬ್ಬ ದೊಡ್ಡ ವ್ಯಕ್ತಿ ಕೂತಿದ್ದ ನಮ್ಮನ್ನ ನೋಡಿ, ಸ್ಮೈಲ್ ಮಾಡ್ತಾ, ಸೀತಾ ಕರ್ಕೊಂಡು ಬಂದ ನಿನ್ನ ಫ್ರೆಂಡ್ ನ ಅಂತ ಹೇಳಿ ಎದ್ದು ನಿಂತು. ನನ್ನ ಕಡೆಗೆ ನೋಡಿ ಏನಪ್ಪಾ ಮಹಿ ಹೇಗಿದ್ದೀಯ ಅಂತ ಕೇಳಿದ್ರು. ನಾನ್ ಚೆನ್ನಾಗಿ ಇದ್ದೀನಿ ಸರ್ ನೀವು ಹೇಗಿದ್ದೀರ ಅಂತ ಕೇಳ್ದೆ. ನಾನ್ ಚೆನ್ನಾಗಿ ಇದ್ದೀನಿ. ಅದ್ರೆ ನೀನು ನನ್ನ ಸರ್ ಅಂತ ಕರಿಬೇಡ ಸೀತಾ ಗೆ ತಾತ ಅಂದ್ರೆ ನಿನಗೂ ತಾತ ನೇ ತಾತ ಅಂತ ಕರಿ ಇಲ್ಲಾ ಕಾಲೇಜ್ ಅಲ್ಲಿ ಫ್ರೆಂಡ್ಸ್ ನ ಕರಿಯೋ ಹಾಗೇ ಬ್ರೋ ಅಂತ ಕರಿ ಅಂತ ಹೇಳಿದ್ರು. ತಾತ ಮಾತನ್ನ ಕೇಳಿ ಓಕೆ ಬ್ರೋ ಅಂತ ಹೇಳಿದೆ. ಸೀತಾ ನೀವು ಮಾತಾಡ್ತಾ ಇರಿ ಬರ್ತೀನಿ ಅಂತ ಹೊರಟು ಹೋದಳು. ತಾತ ಕೂತ್ಕೋಳ್ಳೋಕೆ ಹೇಳಿದ್ರು ನಾನು ಅವರ ಪಕ್ಕ ಕೂತೆ. ತಾತ ಮಾತಾಡ್ತಾ ಹೇಗಿದೆ ದೆಹಲಿ, ಕಾಲೇಜ್, ಅಂತ ಕೇಳಿದ್ರು. ಪರ್ವಾಗಿಲ್ಲ ತಾತ, ಈಗೀಗ ಎಲ್ಲಾ ಅಡ್ಜಸ್ಟ್ ಆಗ್ತಾ ಇದೆ. ಸ್ಟಡೀಸ್ ಮುಗಿಯೋವರೆಗೂ ಇಲ್ಲೇ ಇರ್ತೀನಿ ಅಲ್ವಾ ಅಭ್ಯಾಸ ಆಗಿ ಬಿಡುತ್ತೆ ಅಂತ ಹೇಳ್ದೆ. ಅದಕ್ಕೆ ತಾತ ಮಾತಾಡ್ತಾ ಮೊದಲು ಇಲ್ಲಿಗೆ ಬಂದಾಗ ನನಗು ಹೀಗೆ ಅನ್ನಿಸ್ತು. ಆಮೇಲೆ ಅಭ್ಯಾಸ ಆಗಿ ಬಿಡ್ತು. ಅಂದಹಾಗೆ ಏನ್ ತಗೋತಿಯ ಕಾಫಿ ಟೀ ಅಂತ ಕೇಳಿದ್ರು. ಏನಾದ್ರು ಓಕೆ ಅಂತ ಹೇಳ್ದೆ. ತಾತ ಅಡುಗೆ ಕೆಲಸ ಮಾಡೋವ್ರಿಗೆ 2 ಕಾಫಿ ತರೋಕೆ ಹೇಳಿದ್ರು.
ಮತ್ತೆ ಮಹಿ ಮುಂದೆ ಏನ್ ಮಾಡಬೇಕು ಅಂತ ಅನ್ಕೊಂಡು ಇದ್ದಿಯಾ ಅಂತ ಕೇಳಿದ್ರು. ಸದ್ಯಕ್ಕೆ ಫ್ಯೂಚರ್ ಬಗ್ಗೆ ಇನ್ನು ಏನು ನಿರ್ಧಾರ ಮಾಡಿಲ್ಲ ತಾತ. ಮೊದಲು ಸ್ಟಡೀಸ್ ಫಿನಿಷ್ ಮಾಡೋಣ ಆಮೇಲೆ ಪ್ಲಾನ್ ಮಾಡೋಣ ಅಂತ ಇದ್ದೀನಿ ಅಂತ ಹೇಳ್ದೆ. ಅದು ನಿಜಾನೆ ಮೊದಲು ಸ್ಟಡೀಸ್ ಮುಗಿಸು ಆಮೇಲೆ ನಿನಗೆ ಐಡಿಯಾ ಬರುತ್ತೆ ಏನ್ ಮಾಡಬೇಕು ಅಂತ ಅವಾಗ ಮುಂದೆ ಹೆಜ್ಜೆ ಇಡು ಅಂತ ಹೇಳಿದ್ರು. ಹೀಗೆ ನಾವು ಮಾತಾಡ್ತಾ ಇರೋವಾಗ ಅಡುಗೆ ಕೆಲಸ ಮಾಡೋ ಲೇಡಿ ನೀರು ಮತ್ತೆ ಕಾಫಿ ನ ತಂದು ಕೊಟ್ರು. ನಾನು ಅಡುಗೆ ಮಾಡೋ ಲೇಡಿ ನ ನೋಡಿದೆ. ನನ್ನ ವಿಚಿತ್ರ ವಾಗಿ ನೋಡಿದ್ರು. ನಾನು ನೀರನ್ನ ತೆಗೆದುಕೊಂಡು ಥ್ಯಾಂಕ್ಸ್ ಅಂತ ಹೇಳ್ದೆ. ಅವರು ಕಾಫಿ ಕಪ್ ನ ಟಿಪೋಯ್ ಮೇಲೆ ಇಟ್ಟು ಅಡುಗೆ ಮನೆ ಕಡೆಗೆ ಹೋಗ್ತಾ ಮತ್ತೆ ಒಂದು ಸರಿ ತಿರುಗಿ ನೋಡಿ ಒಳಗೆ ಹೋದ್ರು. ನಾನು ತಾತ ಕಾಫಿ ಕುಡಿತಾ ಮಾತಾಡೋಕೆ ಶುರು ಮಾಡಿದ್ವಿ. ಸ್ವಲ್ಪ ಹೊತ್ತಿಗೆ ಸೀತಾ ಕೂಡ ಬಂದು ಜಾಯಿನ್ ಆದ್ಲು ನಮ್ ಜೊತೆಗೆ. ಮೂರು ಜನ ಮಾತಾಡ್ತಾ ಕುತ್ಕೊಂಡ್ವಿ. ಆಗಾಗ ನಾನು ಅಡುಗೆ ಮನೆ ಕಡೆಗೆ ನೋಡ್ತಾ ಇದ್ದೆ. ಅಡುಗೆ ಮನೆ ಕೆಲಸ ಮಾಡೋವ್ಳು ನಾವು ಮಾತಾಡೋದನ್ನ ಕೇಳಿಸೋ ಅಷ್ಟು ಹತ್ತಿರ ನಿಂತು ಏನೋ ಕೆಲಸ ಮಾಡ್ತಾ ಇರೋ ತರ ನಿಂತು ಕೇಳಿಸಿ ಕೊಳ್ತಾ ಇದ್ಲು. ನಾನು ಅವಳನ್ನ ಸ್ವಲ್ಪ ಸೂಕ್ಷ್ಮ ವಾಗಿ ಗಮನಿಸಿದೆ. ಪಕ್ಕ ನಾರ್ತ್ ಇಂಡಿಯನ್ ಅಂತ ಅನ್ನಿಸ್ತು. ಅದ್ರೆ ನಾವು ಮಾತಾಡ್ತಾ ಇರೋದು ಕನ್ನಡದಲ್ಲಿ ಅವಳಿಗೆ ಕನ್ನಡ ಬರುತ್ತಾ ಅನ್ನೋ ಅನುಮಾನ ಬಂದು. ಅವರ ಕಡೆಗೆ ನೋಡಿ ಅಕ್ಕ ಕುಡಿಯೋದಕ್ಕೆ ಇನ್ನು ಸ್ವಲ್ಪ ನೀರು ಕೊಡ್ತೀರಾ ಅಂತ ಕೇಳ್ದೆ. ಅವರು ನನ್ನ ಕಡೆಗೆ ತಿರುಗಿ ನೋಡದೆ ಅವರ ಪಾಡಿಗೆ ಅವರು ಕೆಲಸ ಮಾಡ್ತಾ ಇದ್ರು. ತಾತ ನಾನು ಕೇಳೋದನ್ನ ನೋಡಿ ಮಹಿ ಅವರಿಗೆ ಕನ್ನಡ ಬರೋದಿಲ್ಲ. ಪಂಜಾಬಿ ಬಿಟ್ಟು ಸ್ವಲ್ಪ ಹಿಂದಿ ಬರುತ್ತೆ ಅಂತ ಹೇಳಿ ಹಿಂದಿ ಅಲ್ಲಿ ಹೇಳಿದ್ರು ಅವರಿಗೆ. ಅಡುಗೆ ಕೆಲಸದವಳು ಟೀಕೆ ಸಾಬ್ ಅಂತ ಹೇಳಿ ಅಲ್ಲೇ ಪಕ್ಕದಲ್ಲಿ ಇಟ್ಟಿದ್ದ ಮೊಬೈಲ್ ನ ಕೈಲಿ ಇಡ್ಕೊಂಡು ಅಡುಗೆ ಮನೆಗೆ ಹೋದ್ಲು. ನಾನು ಆಗ ಮೊಬೈಲ್ ಸ್ಕ್ರೀನ್ ಕಡೆಗೆ ನೋಡಿದೆ. ಯಾರೋ ಕಾಲ್ ಅಲ್ಲಿ ಇದ್ರು. ಆಗ ನನಗೆ ಅರ್ಥ ಆಯ್ತು. ಮತ್ತೆ ತಾತ ಸೀತಾ ಜೊತೆಗೆ ಮಾತಾಡ್ತಾ ಕೂತೆ. ನೀರನ್ನ ತಂದು ಕೊಟ್ಟರು ನಾನು ಸ್ವಲ್ಪ ನೀರನ್ನ ಕುಡಿದು . ಮತ್ತೆ ತಾತ ಸೀತಾ ಜೊತೆಗೆ ಮಾತಾಡ್ತಾ ಕೂತೆ.
ತಾತ ಅವರ ಜೀವನದ ಬಗ್ಗೆ ಹೇಳ್ತಾ ಇದ್ರು ನಾನು ತುಂಬಾ ಇಂಟ್ರೆಸ್ಟಿಂಗ್ ಅನ್ನಿಸ್ತು ಕೇಳ್ತಾ ಇದ್ದೆ. ಸೀತಾ ಮಾತ್ರ ನಾವು ಮಾತಾಡೋದನ್ನ ಕೇಳ್ತಾ ಕೂತಿದ್ಲು. ಸ್ವಲ್ಪ ಸಮಯದ ನಂತರ ಸೀತಾ ಅವರ ತಂದೆ ತಾಯಿ ಆಫೀಸ್ ಮುಗಿಸಿಕೊಂಡು ಮನೆ ಒಳಗೆ ಬರ್ತಾ ನಾವು ಮಾತಾಡ್ತಾ ಇರೋದನ್ನ ನೋಡಿ, ಏನ್ ಮಾವ ಅಪರೂಪಕ್ಕೆ ಕನ್ನಡವರು ಸಿಕ್ಕಿ ಬಿಟ್ರು ಅಂತ ತುಂಬಾ ಖುಷಿಯಾಗಿ ಮಾತಾಡ್ತಾ ಇದ್ದೀರಾ ಅಂತ ಹೇಳ್ತಾ ನಮ್ ಹತ್ತಿರ ಬಂದ್ರು. ತಾತ ಹಾಗೇನಿಲ್ಲ ಅಂತ ಹೇಳಿ ಮಹಿ ಇವಳು ನನ್ನ ಸೊಸೆ, ಸೊಸೆ ಅನ್ನೋದಕ್ಕಿಂತ ಮಗಳು ನನಗೆ ಹೆಸರು ಧಮಯಂತಿ, ಅವನು ನನ್ನ ಮಗ ಸುಧೀರ್ ಅಂತ ಪರಿಚಯ ಮಾಡಿಸಿದ್ರು. ನಾನು ಎದ್ದು ನಮಸ್ತೆ ಮೇಡಂ ನಮಸ್ತೆ ಸರ್ ಅಂತ ಹೇಳ್ದೆ. ಮೇಡಂ ನಮಸ್ತೆ ಮಹಿ ನೀವು ಮಾತಾಡ್ತಾ ಇರಿ ಬರ್ತೀವಿ ಅಂತ ಹೇಳಿ ಅಲ್ಲಿಂದ ಒಳಗೆ ಹೋದ್ರು.
ಸೀತಾ ಇದ್ಕೊಂಡು ತಾತ ಬನ್ನಿ ಹೊರಗೆ ಹೋಗಿ ವಾಕ್ ಮಾಡ್ತಾ ಮಾತಾಡೋಣ ಅಂತ ಹೇಳಿದ್ರು. ತಾತ ನಡೀರಿ ಹೋಗೋಣ ಅಂತ ಹೇಳಿ. ಮೂರು ಜನ ಹೊರಗೆ ಬಂದು ಗಾರ್ಡನ್ ಅಲ್ಲಿ ವಾಕ್ ಮಾಡ್ತಾ ಮಾತಾಡ್ತಾ ಇದ್ವಿ. ಸ್ವಲ್ಪ ಸಮಯದ ನಂತರ ಸೀತಾ ಅವರ ಅಪ್ಪ ಅಮ್ಮ ಬಂದ್ರು. ಸೀತಾ ಅವರ ಅಮ್ಮ ಇದ್ದುಕೊಂಡು ಸೀತಾ ಬಾ ಹೋಗಿ ಡಿನ್ನರ್ ಗೆ ರೆಡಿ ಮಾಡೋಣ ಅಂತ ಹೇಳಿದ್ರು. ಸೀತಾ ನಡಿ ಅಮ್ಮ ಅಂತ ಹೇಳಿ ಮನೆ ಒಳಗೆ ಹೋದ್ರು ಅಮ್ಮ ಮಗಳು. ಅಂಕಲ್ ಮಾತಾಡ್ತಾ ಮಹಿ ನಿಮ್ಮನ್ನ ನೆನ್ನೆ ರೆಸ್ಟೋರೆಂಟ್ ಅಲ್ಲಿ ನೋಡಿದೆ ಸೀತಾ ಜೊತೆಗೆ. ಇದು ನಿನ್ನ ಊರಲ್ಲ, ಆದ್ರು ಅಷ್ಟು ಧೈರ್ಯ ವಾಗಿ ಹೇಗೆ ಮಾತಾಡಿದೆ ಅಂತ ಕೇಳಿದ್ರು. ನಾನು ಅಂಕಲ್ ಕಡೆಗೆ ನೋಡಿ, ಸರ್ ರೆಸ್ಟೋರೆಂಟ್ ಬಿಸಿನೆಸ್ ಮಾಡೋವ್ರು ಯಾವಾಗ್ಲೂ ಒಂದು ರೂಲ್ಸ್ ನ ಫಾಲೋ ಮಾಡ್ತಾರೆ, ಅದೇ ಪಬ್ಲಿಕ್ ಅಟೆಂಷನ್, ಅವರು ಎಷ್ಟೇ ಕ್ವಾಲಿಟಿ ಫುಡ್ ನ ಎಷ್ಟೇ ಟೆಸ್ಟ್ ಇರೋ ಫುಡ್ ನ ಕೊಟ್ರು. ಫೈನಲಿ ಪಬ್ಲಿಕ್ ಹೇಳೋ ಮಾತಿನ ಮೇಲೆ ಅವರ ಬಿಸಿನೆಸ್ ನಡಿಯೋದು. ಯಾರಾದ್ರೂ ಒಬ್ರು ರೆಸ್ಟೋರೆಂಟ್ ಅಲ್ಲಿ ಫುಡ್ ಚೆನ್ನಾಗಿ ಇದೆ ಅಂತ ಅವರ ಸರ್ಕಲ್ ಅಲ್ಲಿ ಇಲ್ಲಾ ಸೋಶಿಯಲ್ ಮೀಡಿಯಾ ದಲ್ಲಿ ಹೇಳಿದ್ರೆ. ಫುಡ್ ಲವರ್ಸ್ ಎಲ್ಲೇ ಇದ್ರು ಒಂದು ಸರಿ ಆದ್ರು ಟೆಸ್ಟ್ ಮಾಡಬೇಕು ಅಂತ ಬಂದೆ ಬರ್ತಾರೆ. ರೆಸ್ಟೋರೆಂಟ್ ಅವರಿಗೆ ಇದು ಫ್ರೀ ಪಬ್ಲಿಸಿಟಿ, ರೆಸ್ಟೋರೆಂಟ್ ಓನರ್ ಎಷ್ಟೇ ದೊಡ್ಡ ವ್ಯಕ್ತಿ ಆಗಿರಲಿ ಪಬ್ಲಿಕ್ ಅಲ್ಲಿ ರಾಂಗ್ ಸ್ಟೆಪ್ ತಗೋಳೋದು ಇಲ್ಲಾ, ಒಂದು ವೇಳೆ ನೆನ್ನೆ ಏನಾದ್ರು ರೆಸ್ಟೋರೆಂಟ್ ಓನರ್ ದುಡ್ಡೇ ಮುಖ್ಯ ಅಂತ ಹೇಳಿ ಮ್ಯಾನೇಜರ್ ನ ಸಪೋರ್ಟ್ ಮಾಡ್ಕೊಂಡು ಬಂದಿದ್ರೆ. ಅಲ್ಲಿಗೆ ಬಂದ ಕಸ್ಟಮರ್ಸ್ ರೆಸ್ಟೋರೆಂಟ್ ಬಗ್ಗೆ ವಿಷಯ ದ ಬಗ್ಗೆ ಪ್ರಶ್ನೆ ಮಾಡಿ, ಕೇಳ್ತಾ ಇದ್ರು ಸೋಶಿಯಲ್ ಮೀಡಿಯಾ ದಲ್ಲಿ ರೆಸ್ಟೋರೆಂಟ್ ಬಗ್ಗೆ ಹೇಳ್ತಾ ಇದ್ರು. ದೊಡ್ಡ ಪ್ರಾಬ್ಲಮ್ ಆಗಿರೋದು. ಫ್ಯೂಚರ್ ಅಲ್ಲಿ ಓನರ್ ಗೆ ತೊಂದ್ರೆ ಆಗಿರೋದು. ಅದಕ್ಕೆ ಅವನು ಸಾರೀ ಕೇಳಿ ಮ್ಯಾನೇಜರ್ ನ ಕೆಲಸದಿಂದ ತೆಗೆದು ಹಾಕಿದ. ಇವಾಗ ರೆಸ್ಟೋರೆಂಟ್ ಓನರ್ ಗೆ ಒಳ್ಳೆ ಇಮೇಜ್ ಬಂತು ಫ್ರೀ ಪಬ್ಲಿಸಿಟಿ ಬಂತು, ಇವೆರಡು ಬಂದಾಗ ಆಟೋಮ್ಯಾಟಿಕ್ ಬಿಸಿನೆಸ್ ಕೂಡ ಜಾಸ್ತಿ ಆಗುತ್ತೆ. ಅದು ಅಲ್ಲದೆ ನಾವು ಕಾಲೇಜ್ ಸ್ಟೂಡೆಂಟ್ಸ್, ಒಂದು ರಾಂಗ್ ಸ್ಟೆಪ್ ತಗೊಂಡಿದ್ರು ಇವತ್ತು ಅವನು ರೆಸ್ಟೋರೆಂಟ್ ನ ಪರ್ಮನೆಂಟ್ ಆಗಿ ಕ್ಲೋಸ್ ಮಾಡಾಬೇಕಾಗಿತ್ತು ಅಂತ ಹೇಳ್ದೆ..
ತಾತ ನಾನ್ ಹೇಳೋದನ್ನ ಕೇಳಿ ಖುಷಿಯಾಗಿ, ನಿನ್ನ ಏನೋ ಅನ್ಕೊಂಡು ಇದ್ದೆ ಮಹಿ, ನಿನ್ನಲ್ಲಿ ಆಲೋಚನೆಗಳು ಯೋಚ್ನೆ ಮಾಡೋ ರೀತಿ ತುಂಬಾ ಇದೆ. ಫ್ಯೂಚರ್ ಅಲ್ಲಿ ನಿನ್ ಏನಾದ್ರು ಬಿಸಿನೆಸ್ ಮಾಡಿದ್ರೆ ಒಳ್ಳೆ ಬಿಸಿನೆಸ್ ಮ್ಯಾನ್ ಆಗ್ತೀಯಾ ಅಂತ ಹೇಳಿದ್ರು. ಅಂಕಲ್ ಮಾತಾಡ್ತಾ ಮಹಿ ನಿನ್ ಹೇಳಿದ್ದನ್ನ ಕೇಳಿದ ಮೇಲೆ ನನಗು ತಾತ ಹೇಳಿದ್ದು ನಿಜ ಅನ್ನಿಸ್ತಾ ಇದೆ. ಬಿಸಿನೆಸ್ ಮಾಡೋವ್ರಿಗೆ ಮೊದಲು ಬೇಕಾಗಿರೋದು ಒಂದು ವ್ಯಕ್ತಿ ನ ಅರ್ಥ ಮಾಡಿಕೊಂಡು ನಾವು ತೆಗೆದು ಕೊಳ್ಳೋ ನಿರ್ಧಾರ. ಅದು ನಮಗೆ ಎಷ್ಟು ಉಪಯೋಗ ಆಗುತ್ತೆ ಅನ್ನೋದು ತುಂಬಾ ಮುಖ್ಯ. ನಿನಗೆ ಬಿಸಿನೆಸ್ ಮ್ಯಾನ್ ಆಗೋ ಎಲ್ಲಾ ಲಕ್ಷಣ ಇದೆ. ನೆನ್ನೆ ನೀನು ಮಾತಾಡಿದ ರೀತಿ ಇವತ್ತು ನೀನು ಹೇಳಿದ ರೀತಿ ಕೇಳಿದ ಮೇಲೆ ನಾನು ಒಂದು ನಿರ್ಧಾರ ಮಾಡಿದ್ದೀನಿ ನನ್ನ ಕಂಪನಿ ಅಲ್ಲಿ ವರ್ಕ್ ಮಾಡ್ತಿಯಾ ಅಂತ ಕೇಳಿದ್ರು. ನನಗೆ ಶಾಕ್ ಆಯ್ತು, ನಾನು ಅಂಕಲ್ ಕಡೆಗೆ ನೋಡಿ ಸರ್ ಏನ್ ಹೇಳ್ತಾ ಇದ್ದೀರಾ ನನ್ನ ಸ್ಟಡೀಸ್ ಇನ್ನು ಈಗ ಶುರುವಾಗಿದೆ ನೀವು ನೋಡಿದ್ರೆ ಜಾಬ್ ಮಾಡ್ತೀರಾ ಅಂತ ಕೇಳ್ತಾ ಇದ್ದೀರಾ ಅಂತ ಕೇಳ್ದೆ. ಅದಕ್ಕೆ ಅಂಕಲ್ ಮಹಿ ನಾನು ನಿನ್ನ ಸ್ಟಡೀಸ್ ನ ಸ್ಟಾಪ್ ಮಾಡಿ ಜಾಬ್ ಮಾಡು ಅಂತ ಕೇಳ್ತಾ ಇಲ್ಲಾ. ಸ್ಟಡೀಸ್ ಜೊತೆಗೆ ಜಾಬ್ ಕೂಡ ಮಾಡು. ಅದು ಅಲ್ಲದೆ ಈಗ ನನ್ನ ಬಿಸಿನೆಸ್ ಕೂಡ ಬೇರೆಯವರಿಂದ ಹಾಳಾಗ್ತಾ ಇದೆ, ಪಾರ್ಟ್ನರ್ಸ್ ಎಲ್ಲಾ ಭಯ ಬೀಳ್ತಾ ಇದ್ದಾರೆ. ನಿನಗೆ JVL ಗ್ರೂಪ್ ಆಫ್ ಕಂಪನಿ ಬಗ್ಗೆ ಗೊತ್ತಿರುತ್ತೆ ಅಂತ ಆಂಕೊಳ್ತೀನಿ, ಅ ಕಂಪನಿ ನಾವು ಹೋದ ಕಡೆಯಲ್ಲ ನಮಗೆ ಅಡ್ಡ ಬರ್ತಾ ಇದೆ. ಬರೋ ಪ್ರಾಜೆಕ್ಟ್ ನ ಎಲ್ಲಾ ಏನೋ ಒಂದು ಮಾಡಿ ನಮಗೆ ಬರದೇ ಇರೋ ಹಾಗೇ ಮಾಡ್ತಾ ಇದೆ. ಅಂತ ಗುಳ್ಳೆ ನರಿ ಕೆಲಸ ಮಾಡೋ ಕಂಪನಿಗಳಿಗೆ ನಿನಂತ ಯೋಚನಾ ಶಕ್ತಿ ಇರೋ ವ್ಯಕ್ತಿ ನೇ ಸರಿ ಅಂತ ಅನ್ನಿಸ್ತಾ ಇದೆ. ಅದಕ್ಕೆ ನಿನ್ನ ಕೇಳ್ತಾ ಇರೋದು ಅಂತ ಕೇಳಿದ್ರು.
ನಾನು ಅಂಕಲ್ ಕಡೆಗೆ ನೋಡಿ. ಸರ್ ನನಗೆ ನಾಳೆವರೆಗೂ ಟೈಮ್ ಕೊಡಿ ಯೋಚ್ನೆ ಮಾಡಿ ಹೇಳ್ತಿನಿ ಅಂತ ಹೇಳ್ದೆ. ಅಂಕಲ್ ಸರಿ ಮಹಿ ಯೋಚ್ನೆ ಮಾಡಿ ಹೇಳು ಅಂತ ಹೇಳಿದ್ರು. ಹಾಗೇ ಇನ್ನೊಂದು ವಿಷಯ ಸರ್ ಈ ವಿಷಯ ನಮ್ಮಲ್ಲೇ ಇರಲಿ. ಸದ್ಯಕ್ಕೆ ಯಾರಿಗೂ ಹೇಳಬೇಡಿ ಅಂತ ಹೇಳ್ದೆ. ಅಂಕಲ್ ಸರಿ ಮಹಿ ಈ ವಿಷಯ ನಮ್ಮಲ್ಲೇ ಇರುತ್ತೆ ಅಂತ ಹೇಳಿ. ನೀವು ಮಾತಾಡ್ತಾ ಇರಿ ಬರ್ತೀನಿ ಅಂತ ಹೇಳಿ ಮನೆ ಒಳಗೆ ಹೋದ್ರು. ತಾತ ನನ್ನ ಭುಜದ ಮೇಲೆ ಕೈ ಹಾಕಿ ನಗ್ತಾ ಒಪ್ಪಿಕೊಂಡವನು ಯಾಕೋ ನಾಳೆ ತನಕ ಟೈಮ್ ಕೇಳಿದೆ ಅಂತ ಹೇಳಿದ್ರು. ನಾನು ಅವರ ಕಡೆಗೆ ನೋಡ್ತಾ, ತಾತ ಇವಾಗ ನಾನು ಓಕೆ ಅಂತ ಹೇಳಿದೆ ಅನ್ಕೋ, ಬಿಸ್ನೆಸ್ ಮ್ಯಾನ್ ಹೇಗೆ ಆಗ್ತೀನಿ ಅಂತ ಹೇಳ್ದೆ. ತಾತ ನಗ್ತಾ ಕಿಲಾಡಿ ಕಣೋ ನೀನು ಬಾ ಒಳಗೆ ಹೋಗೋಣ ಅಂತ ಹೇಳಿದ್ರು. ನಾನು ತಾತನ ಕಡೆಗೆ ನೋಡ್ತಾ, ತಾತ ನಾನು ನಿಮ್ಮನ್ನ ಒಂದು ವಿಷಯ ಕೇಳ್ತೀನಿ ಮಾಡ್ತೀರಾ ಅಂತ ಕೇಳ್ದೆ. ತಾತ ಹಾಗಲೇ ಕೆಲಸ ಹೇಳೋಕೆ ಶುರು ಮಾಡಿದ ಅಂತ ಹೇಳಿ, ಸರಿ ಏನ್ ಮಾಡಬೇಕು ಹೇಳು ಅಂತ ಹೇಳಿದ್ರು. ನನಗೆ ನಿಮ್ ಮನೆ ಅಡುಗೆ ಕೆಲಸ ಮಾಡೋವಳ ಮೊಬೈಲ್ ಬೇಕು ಅಂತ ಕೇಳ್ದೆ. ತಾತ ಶಾಕ್ ಆಗಿ ನನ್ನ ಕಡೆಗೆ ನೋಡ್ತಾ ಆಗ್ಲೇ ಕಣ್ಣು ಹಾಕಿದ ಅವಳ ಮೇಲೆ ಬಾ ಏನೋ ಒಂದು ಮಾಡ್ತೀನಿ ಅಂತ ಹೇಳಿದ್ರು. ಇಬ್ರು ಮನೆ ಒಳಗೆ ಹೋದ್ವಿ.
****************************************
P. S