ಮನೆ ಡೋರ್ ಬೆಲ್ ಅದ ಸದ್ದಿಗೆ ಒಬ್ಬ ವ್ಯಕ್ತಿ ಬಂದು ಡೋರ್ ನಾ ಓಪನ್ ಮಾಡಿ, ಎದುರುಗಡೆ ನಿಂತಿದ್ದ ಹುಡುಗಿ ನಾ ನೋಡಿ, ಹಾಯ್ ಖುಷಿ ಹೇಗಿದ್ದೀಯ? ಅಂತ ಕೇಳ್ತಾರೆ, ಖುಷಿ ಅವರನ್ನ ನೋಡಿ ನಾನ್ ಚೆನ್ನಾಗಿ ಇದ್ದೀನಿ ಗ್ರಾಂಡ್ ಪಾ, ನೀವ್ ಹೇಗಿದ್ದೀರ? ಯಾವಾಗ್ ಬಂದ್ರಿ ನಾಸಿಕ್ ಯಿಂದ ಅಂತ ಕೇಳ್ತಾಳೆ. ನಾನ್ ಸೂಪರ್ ಖುಷಿ ಬಾ ಒಳಗೆ ಅಂತ ಹೇಳಿ ಅವಳನ್ನ ಮನೆ ಒಳಗೆ ಕರೆದು ಡೋರ್ ಕ್ಲೋಸ್ ಮಾಡಿ, ಇಬ್ರು ಹಾಲ್ ಗೆ ಬರ್ತಾರೆ, ಖುಷಿ ಗ್ರಾಂಡ್ ಮಾ ನಾ ನೋಡಿ ಅವರ ಜೊತೆಗೆ ಮಾತಾಡಿಕೊಂಡು, ಗುಂಜಾಲ್ ಎಲ್ಲಿ ಅಂತ ಕೇಳಿ ಅವರಿಗೆ ಮತ್ತೆ ಸಿಗ್ತೀನಿ ಅಂತ ಹೇಳಿ ಗುಂಜಾಲ್ ರೂಮ್ ಕಡೆ ಬರ್ತಾಳೆ, ಖುಷಿ ಗುಂಜಾಲ್ ರೂಮ್ ಡೋರ್ ಓಪನ್ ಮಾಡಿ, ಒಳಗೆ ಬರ್ತಾಳೆ, ರೂಮ್ ಅಲ್ಲಿ ಎಲ್ಲೂ ಕಾಣಿಸೋದಿಲ್ಲ, ಎಲ್ಲಿ ಹೋದ್ಲು ಹೋದ್ಲು ಅಂತ ನೋಡ್ತಾ ಇರೋವಾಗ ರೂಮ್ ಬಾಲ್ಕೋನಿ ಕಡೆಯಿಂದ ಒಂದು ಧ್ವನಿ ಕೇಳುತ್ತೆ, ಖುಷಿ ಅ ಕಡೆ ಹೋಗ್ತಾಳೆ, ಗುಂಜಾಲ್ ಬಾಲ್ಕನಿ ಅಲ್ಲಿ ನಿಂತು ಹೊರಗಡೆ ಮೇನ್ ರೋಡ್ ಕಡೆ ನೋಡ್ತಾ ಇರ್ತಾಳೆ.
ಖುಷಿ ಅವಳನ್ನ ನೋಡಿ, ಲೇ ಇಲ್ಲಿ ನಿಂತು ಯಾರನ್ನ ನೋಡ್ತಾ ಇದ್ದಿಯಾ? ಅಂತ ಕೇಳ್ತಾಳೆ.
ಗುಂಜಾಲ್,,, ಏನು ಇಲ್ವೆ ಯಾವಾಗಲು ಒಬ್ಳೆ ಬರ್ತಾ ಇದ್ದೆ, ಬೈಕ್ ಅಲ್ಲಿ ಇಲ್ಲಾ ಕಾರ್ ಅಲ್ಲಿ, ಇಲ್ಲಾ ನಿನ್ನ ಬ್ರದರ್ ಡ್ರಾಪ್ ಮಾಡ್ತಾ ಇದ್ರು, ಬಟ್ ಇವತ್ತು ಒಬ್ಬ ಹುಡುಗನ ಜೊತೆಗೆ ಬಂದೆ, ಅವನು ಯಾರು ಅಂತ ಯೋಚ್ನೆ ಮಾಡ್ತಾ ಇದ್ದೀನಿ?
ಖುಷಿ,,, ಓ ಅವನ ನಮ್ಮತ್ತೆ ಇದ್ದಾಳೆ ಅಲ್ವಾ ಧಮಯಂತಿ. ಅಂತ ಇನ್ನು ಏನೋ ಹೇಳೋಕೆ ಹೋಗೋವಾಗ
ಗುಂಜಾಲ್,,, ಏನು ಧಮಯಂತಿ ಆಂಟಿ ಗೆ ಇಷ್ಟು ದೊಡ್ಡ ಮಗ ಇದ್ದಾನ ಅದು ಇಷ್ಟು ಹ್ಯಾಂಡ್ ಸಂ ಆಗಿ, ಇಷ್ಟು ದಿನ ಹೇಳೇ ಇಲ್ಲಾ, ಏನು ಇಬ್ಬರಿಗೂ ಲವ್ ಅ, ಅದಕ್ಕೆ ನಾ ನನಗೆ ಇಷ್ಟುದಿನದಿಂದ ಹೇಳ್ದೆ ಮುಚ್ಚಿಟ್ಟ ಅಂತ ಅವಳ ಪಾಡಿಗೆ ಅವಳು ಹೇಳ್ತಾ ಇದ್ರೆ.
ಖುಷಿ,,, ಲೇ ನಿಲ್ಲಿಸೆ, ಬಿಟ್ರೆ ಲವ್ ಮದುವೆ ಮಕ್ಕಳು ಅಂತ ಏನೇನೋ ಹೇಳ್ತಿಯ? ಅವನು ನಮ್ಮತ್ತೆ ಮಗನು ಅಲ್ಲ, ನನ್ನ ಲವರ್ ಅಂತು ಮೊದಲೇ ಅಲ್ಲ, ಜರ್ಮನಿ ಯಿಂದ ಬಂದಿದ್ದಾನೆ, ಅತ್ತೆ ಅವರ ಫ್ರೆಂಡ್ ಮಗ, ಇಲ್ಲಿಗೆ ಓದೋಕೆ ಅಂತ ಬಂದಿದ್ದಾನೆ,
ಗುಂಜಾಲ್,,, ಏನು ಆಂಟಿ ಫ್ರೆಂಡ್ ಮಗನ? ಮತ್ತೆ ನಿನ್ನ ಡ್ರಾಪ್ ಮಾಡಿ ಹೋದ, ಏನು ಟ್ರೈ ಮಾಡ್ತಾ ಇದ್ದಾನ? ನಿನಗೆ?
ಖುಷಿ,,, ಲೇ ಸುತ್ತಿ ಬಳಸಿ ನೀನು ಅಲ್ಲಿಗೆ ಬರ್ತಿಯಾ? ಅಂತದ್ದು ಏನು ಇಲ್ಲಾ. ಇವತ್ತು ಆಂಟಿ ಮನೆಗೆ ಹೋಗಿದ್ವಿ, ಭುವನ್ ಗೆ ಸೀತಾ ನಾ ಕೇಳೋಕೆ, ಅವಾಗ ನೋಡಿದ್ದು, ಅವನನ್ನ ಅಲ್ಲಿ, ಭುವನ್ ರಾಶಿ ಲವ್ ಮಾಡ್ತಾ ಇದ್ದಾರೆ ಅಂತ ಅವನೇ ಅಪ್ಪ ಅಮ್ಮ ನಿಗೆ ಹೇಳಿದ, ಆಮೇಲೆ ಮನೆಯಿಂದ ಹೊರಟು ಹೋದ, ಇಲ್ಲಿಗೆ ಬರೋವಾಗ ಮೇನ್ ರೋಡ್ ಅಲ್ಲಿ ಆಟೋ ಗೋಸ್ಕರ ಕಾಯ್ತಾ ಇದ್ದೆ ಅವಾಗ ಸಿಕ್ಕಿದ, ಮನೇಲಿ ನೋಡಿದೆ ಅಲ್ವಾ ಅಂತ ಮಾತಾಡಿಸಿದ್ರೆ ಯಾರೋ ಗೊತ್ತೇ ಇಲ್ಲಾ ಅಂತ ಹೇಳ್ದ, ಆಮೇಲೆ ಅವನೇ ಸದ್ಯಕ್ಕೆ ಈ ರೋಡ್ ಅಲ್ಲಿ ಆಟೋ ಏನು ಸಿಗಲ್ಲ ಫ್ರೆಂಡ್ ಯಾರಾದ್ರೂ ಇದ್ರೆ ಕಾಲ್ ಮಾಡಿ ಡ್ರಾಪ್ ತಗೋಳಿ ಅಂತ ಹೇಳ್ದ, ಆಮೇಲೆ ಅವನ ಬೈಕ್ ಅಲ್ಲೇ ಕೂತು ಇಲ್ಲಿಗೆ ಡ್ರಾಪ್ ತಗೊಂಡೆ.
ಗುಂಜಾಲ್,,, ಏನು ಕೇಳಿದ ತಕ್ಷಣ ಡ್ರಾಪ್ ಕೊಟ್ನಾ, ಅಂದ್ರೆ ನಿನಗೆ ಟ್ರೈ ಮಾಡ್ತಾ ಇದ್ದಾನೆ ಅಂತ ಆಯ್ತು.
ಖುಷಿ,,, ಅಮ್ಮ ತಾಯಿ ಅಷ್ಟೇನು ಇಲ್ಲಾ, ಸೀತಾ ಗೆ ಕಾಲ್ ಮಾಡ್ತೀನಿ ಅಂತ ಹೇಳ್ದೆ, ಭಯ ಬಿದ್ದು ಡ್ರಾಪ್ ಮಾಡ್ತೀನಿ ಅಂತ ಹೇಳಿ ಡ್ರಾಪ್ ಕೊಟ್ಟ, ಬರ್ತಾ ಸಿಗ್ನಲ್ ಅಲ್ಲಿ ಇಬ್ರು ಲವರ್ಸ್ ಬೈಕ್ ಮೇಲೆ ಅವರ ಪಾಡಿಗೆ ಅವರು ರೋಮ್ಯಾನ್ಸ್ ಮಾಡ್ತಾ ಇದ್ರೆ, ವಿಡಿಯೋ ರೆಕಾರ್ಡ್ ಮಾಡಿ ಅವರ ಬೈಕ್ ಕೀ ತಗೊಂಡು ಬಂದು ಬಿಟ್ಟ, ನೋಡ್ತಾ ಇದ್ರೆ ಅವನಿಗೆ ಲವ್ ಮೇಲೆ ಆಗ್ಲಿ ಲವರ್ಸ್ ಮೇಲೆ ಆಗ್ಲಿ ಗುಡ್ ಒಪೀನಿಯನ್ ಇಲ್ಲಾ ಅಂತ ಅನ್ನಿಸುತ್ತೆ.
ಗುಂಜಾಲ್,,, ಹೌದ ನಾನೆಲ್ಲೋ ನಿನ್ನ ಬಾಯ್ಫ್ರೆಂಡ್ ಅಂತ ಅನ್ಕೊಂಡೆ,
ಖುಷಿ,,, ಇಲ್ವೆ ಅ ರೀತಿ ಏನಾದ್ರೂ ಇದ್ದಿದ್ರೆ ನಿನಗೆ ಹೇಳ್ದೆ ಇರ್ತಾ ಇದ್ನ ಹೇಳು.
ಗುಂಜಾಲ್,,, ಸರಿ ಬಾ ಅಂತ ಹೇಳಿ ಇಬ್ರು ಹೋಗಿ ಬೆಡ್ ಮೆ ಕೂತು ಮಾತಾಡೋಕೆ ಶುರು ಮಾಡ್ತಾರೆ.
**----*****-----**
3 ದಿನಗಳು ಕಳೆದು ಹೋಗುತ್ತೆ.
ರಘುನಂದನ್,,, (ಗಾಬರಿ ಪಡ್ತಾ )ಡಾಕ್ಟರ್ ಈಗ ನನ್ನ ಮೊಮ್ಮಗಳಿಗೆ ಹೇಗಿದೆ?
ಡಾಕ್ಟರ್,,, ನೋಡಿ ಭಯ ಬಿಳೋ ಅಂತದ್ದು ಏನು ಇಲ್ಲಾ, ಮನಸ್ಸಿಗೆ ಏನೋ ತುಂಬಾ ಹಚ್ಚಿಕೊಂಡು ಇರೋ ಹಾಗೇ ಇದೆ, ಅದಕ್ಕೆ ಜ್ವರ ಬಂದಿದೆ, ಇಂಜೆಕ್ಷನ್ ಕೊಟ್ಟಿದ್ದೀನಿ, ಸರಿ ಹೋಗ್ತಾರೆ. ಈಗ ಅವರನ್ನ ಡಿಸ್ಟರ್ಬ್ ಮಾಡಬೇಡಿ, ಅವರು ರೆಸ್ಟ್ ಮಾಡ್ಲಿ ಅಂತ ಹೇಳಿ ಹೊರಟು ಹೋಗ್ತಾರೆ.
ಧಮಯಂತಿ ಸೋಫಾ ಮೇಲೆ ಕುತ್ಕೊಂಡು ಮಗಳ ಪರಿಸ್ಥಿತಿ ನೋಡಿ ನೋವು ಪಡ್ತಾ ಇದ್ರೆ.
ರಘುನಂದನ್,,, ಅಮ್ಮ ಧಮಯಂತಿ ಡಾಕ್ಟರ್ ಹೇಳಿದ್ರು ಅಲ್ವಾ ಸರಿ ಹೋಗ್ತಾಳೆ ಅಂತ, ನೀನು ಹೀಗೆ ನೊಂದುಕೊಂಡು ಇದ್ರೆ ಹೇಗೆ ಹೇಳು ಸಮಾದಾನ ಮಾಡ್ಕೋ.
ಧಮಯಂತಿ,, ಕಣ್ಣಲ್ಲಿ ಕಣ್ಣೀರನ್ನ ತುಂಬಿಕೊಂಡು ಹೇಗೆ ಸಮಾಧಾನ ಮಾಡ್ಕೊಳ್ಳಿ ಮಾವ, ಯಾವಾಗ್ಲೂ ನಗ್ತಾ ಸಂತೋಷ ವಾಗಿ ಈ ಮನೇಲಿ ಓಡಾಡಿಕೊಂಡು ಇದ್ದವಳು, ಈಗೆ 2 ದಿನದಿಂದ ರೂಮ್ ಬಿಟ್ಟು ಬಂದಿಲ್ಲ, ಸರಿಯಾಗಿ ಊಟ ಕೂಡ ಮಾಡಿಲ್ಲ, ಕೇಳಿದ್ರೆ ಏನು ಅಂತ ಕೂಡ ಹೇಳ್ತಿಲ್ಲ. ಮಹಿ ನಾ ಕೇಳೋಣ ಅಂದ್ರೆ ಅವತ್ತು ಹೋದವನು ಇನ್ನು ಮನೆಗೆ ಬಂದಿಲ್ಲ, ಕಾಲ್ ಮಾಡಿದ್ರೆ ಕನೆಕ್ಟ್ ಆಗ್ತಿಲ್ಲ.
ರಘುನಂದನ್,,, ಅಮ್ಮ ಧಮಯಂತಿ, ನಿನ್ನ ನೋವು ನನಗೆ ಅರ್ಥ ಆಗುತ್ತೆ, ಅವಳಿಗೆ ಎಚ್ಚರ ಅದ ಮೇಲೆ ವಿಷಯ ಏನು ಅಂತ ಕೇಳಿ ತಿಳ್ಕೋತೀನಿ, ನೀನು ತಿಂಡಿ ತಿಂದು ಆಫೀಸ್ ಗೆ ಹೋಗಮ್ಮ , ಈ ಟೈಮ್ ಅಲ್ಲೇ ನೀನು ಸುಧೀರ್ ಜೊತೆಗೆ ಇರಬೇಕು, ಪಾಪ ಅವನ ಕಷ್ಟ ನನ್ನಿಂದ ನೋಡೋಕೆ ಆಗ್ತಾ ಇಲ್ಲಾ, ಸೀತಾ ಬಗ್ಗೆ ಏನು ಯೋಚ್ನೆ ಮಾಡಬೇಡ ಅವಳನ್ನ ನಾನ್ ನೋಡ್ಕೋತೀನಿ..
ಧಮಯಂತಿ ಮಾವನ ಬಲವಂತಕ್ಕೆ ತಿಂಡಿ ತಿಂದು ಆಫೀಸ್ ಗೆ ಹೋಗ್ತಾರೆ..
ಖುಷಿ ಗೆ ಸೀತಾ ವಿಷಯ ಗೊತ್ತಾಗಿ, ನೋಡೋಕೆ ಅಂತ ಮನೆಗೆ ಬರ್ತಾಳೆ, ತಾತ ಸೋಫಾ ಮೇಲೆ ಕುತ್ಕೊಂಡು ಏನೋ ಯೋಚ್ನೆ ಮಾಡ್ತಾ ಇರೋದನ್ನ ನೋಡಿ, ಖುಷಿ ತಾತ ಅಂತ ಕರೀತಾಳೆ.
ತಾತ ವಾಸ್ತವಕ್ಕೆ ಬಂದು, ಅ ಖುಷಿ ಹೇಗಿದ್ದಿಯಾ? ಯಾವಾಗ ಬಂದೆ ಅಂತ ಕೇಳ್ತಾರೆ.
ಖುಷಿ,, ತಾತ ಡಲ್ ಆಗಿ ಇರೋದನ್ನ ನೋಡಿ, ಏನ್ ತಾತ ಮೊಮ್ಮಗಳು ಹುಷಾರು ಇಲ್ದೆ ಇದ್ರೆ ನೀನು ಇಷ್ಟು ಡಲ್ ಆಗಿ ಬಿಡ್ತೀಯ, ನಾನ್ ಬಂದೆ ಅಲ್ವಾ ಎಲ್ಲಾ ಸರಿ ಮಾಡಿ ಹೋಗ್ತೀನಿ. ಕೂಲ್ ಆಗಿ ಅಂತ ಹೇಳಿ ಸೀತಾ ರೂಮ್ ಗೆ ಹೋಗ್ತಾಳೆ.
ಸೀತಾ ಬೆಡ್ ಮೇಲೆ ಕೂತು ತುಂಬಾ ಡಲ್ ಆಗಿ ಇರ್ತಾಳೆ, ಅವಳ ಕಣ್ಣಿಂದ ಕಣ್ಣೀರು ಬರ್ತಾ ಇರುತ್ತೆ.
ಖುಷಿ ಅವಳ ರೂಮ್ ಗೆ ಬಂದು ನೋಡ್ತಾಳೆ. ಸೀತಾ ಅವಳ ಪಾಡಿಗೆ ಅವಳು ಯಾವುದೊ ಲೋಕದಲ್ಲಿ ಇರೋದನ್ನ ನೋಡಿ, ಹತ್ತಿರ ಹೋಗಿ ಪಕ್ಕದಲ್ಲಿ ಕೂತು ಮೈ ಮುಟ್ಟಿ ಸೀತಾ ಅಂತ ಕರೀತಾಳೆ, ಮೈ ಮುಟ್ಟೋವಾಗ ಅವಳ ಮೈ ಬಿಸಿಯಾಗಿ ಇರೋದನ್ನ ನೋಡಿ, ಗಾಬರಿಯಾಗಿ, ಲೇ ಸೀತಾ ಅಂತ ಕರೀತಾಳೆ.
ಸೀತಾ,, ವಾಸ್ತವಕ್ಕೆ ಬಂದು ಖುಷಿ ಕಡೆ ನೋಡ್ತಾಳೆ.
ಖುಷಿ ಅವಳ ಕಣ್ಣಲ್ಲಿ ಕಣ್ಣೀರು ಬರೋದನ್ನ ನೋಡಿ, ಗಾಬರಿ ಆಗಿ ಕಣ್ಣೀರು ಹೊರೆಸ್ತಾ ಸೀತಾ ಏನಾಯ್ತು ಯಾಕ್ ಅಳ್ತಾ ಇದ್ದಿಯಾ ಅಂತ ಕೇಳ್ತಾಳೆ. ಸೀತಾ ಏನು ಹೇಳದೆ ಖುಷಿ ನಾ ಗಟ್ಟಿಯಾಗಿ ತಬ್ಬಿಕೊಂಡು ಅಳೋಕೆ ಶುರು ಮಾಡ್ತಳೆ. ಖುಷಿ ಗೆ ಏನು ಅಂದ್ರೆ ಏನು ಅರ್ಥ ಆಗಲ್ಲ, ಖುಷಿ ಅವಳಿಗೆ ಸಮಾಧಾನ ಮಾಡ್ತಾ ಸೀತಾ ನೀನು ಏನು ಹೇಳ್ದೆ ಈ ರೀತಿ ಅಳ್ತಾ ಇದ್ರೆ ಹೇಗೆ ಹೇಳು, ನೀನು ಇಲ್ಲಿ ಹೀಗೆ ಇದ್ರೆ ಮನೆಯವರು ಹೇಗಿದ್ದಾರೆ ಅಂತ ನಿನಗೆ ಗೊತ್ತಾ? ಏನಾಯ್ತು ಅಂತ ನನಗಾದ್ರೂ ಹೇಳು, ನಾನ್ ನಿನ್ನ ಬೆಸ್ಟ್ ಫ್ರೆಂಡ್ ಅಲ್ವಾ, ಏನೇ ಪ್ರಾಬ್ಲಮ್ ಇದ್ರು ನನಗೆ ಹೇಳು, ನಾನ್ ನೋಡ್ಕೋತೀನಿ. ಪ್ಲೀಸ್ ಹೇಳು ಅಂತ ಕೇಳ್ತಾಳೆ.
ಸೀತಾ,,, ಅಳ್ತಾನೆ, ಹೇಳೋ ವಿಷಯ ಆಗಿದ್ರೆ ನಾನ್ ಯಾವಾಗೋ ಹೇಳ್ತಾ ಇದ್ದೆ, ಅದ್ರೆ ಇದು ಅಂತ ಏನೋ ಹೇಳೋವಾಗ, ಸೀತಾ ಮೊಬೈಲ್ ರಿಂಗ್ ಆಗುತ್ತೆ. ಸೀತಾ ತಕ್ಷಣ ಖುಷಿ ನಾ ಬಿಟ್ಟು, ಮೊಬೈಲ್ ಹುಡುಕ್ತಾಳೆ, ಮೊಬೈಲ್ ಸಿಕ್ಕಿದ ಮೇಲೆ ಅದನ್ನ ತಗೊಂಡು ನಂಬರ್ ನೋಡಿ ಖುಷಿಯಾಗಿ ಕಾಲ್ ಪಿಕ್ ಮಾಡಿ,, ಹಲೋ ಎಲ್ಲೋ ಇದ್ದಿಯಾ? ಅವತ್ತು ಮನೆಯಿಂದ ಹೋದವನು ಇವತ್ತಿಗೆ ಒಂದು ಕಾಲ್ ಇಲ್ಲಾ ಮೆಸೇಜ್ ಇಲ್ಲಾ, ನನ್ನ ಪರಿಸ್ಥಿತಿ ಏನು ಅಂತ ಯೋಚ್ನೆ ಮಾಡಿದ್ದಿಯ? ಒಂದು ಮಾತು ಹೇಳಿ ಹೋಗೋಕೆ ಆಗ್ತಾ ಇರಲಿಲ್ವಾ, ನಾನ್ ಏನಾದ್ರೂ ಬೇಡ ಅಂತ ಇದ್ನ, ಯಾರಿಗೆ ಕಾಲ್ ಮಾಡಿ ಕೇಳಿದ್ರು ಗೊತ್ತಿಲ್ಲ ಗೊತ್ತಿಲ್ಲ ಅಂತ ಇದ್ದಾರೆ. ಸಾಯೋ ತರ ಆಗೋಗಿದೆ ನನಗೆ. ಅಂತ ಮಾತಾಡೋವಾಗ, ಖುಷಿ ಯಾರು ಹತ್ತಿರ ಹೀಗೆ ಮಾತಾಡ್ತಾ ಇದ್ದಾಳೆ ಅನ್ನೋದೇ ಅರ್ಥ ಆಗಲ್ಲಾ ಬಟ್ ಮಾತಾಡ್ತಾ ಇರೋದು ಹುಡುಗನಾ ಹತ್ತಿರ ಅಂತ ಮಾತ್ರ ಅವಳಿಗೆ ಅರ್ಥ ಆಗುತ್ತೆ.
ಸೀತಾ ಮತ್ತೆ ಕಾಲ್ ಅಲ್ಲಿ ಮಾತಾಡ್ತಾ, ನೀನು ಎಲ್ಲಿ ಇದ್ದಿಯಾ ಅಂತ ಹೇಳು ಇಲ್ಲ ಅಂದ್ರೆ ನಿನ್ನ ಎಲ್ಲೇ ಇದ್ರು ಹುಡುಕೊಂಡು ಬಂದು ನಾನೇ ಕೊಲೆ ಮಾಡಿ ಬಿಡ್ತೀನಿ ಅಂತ ಹೇಳ್ತಾಳೆ.. .
ನಾನು ಸೀತಾ ಕೋಪನ ಅರ್ಥ ಮಾಡ್ಕೊಂಡು, ಮತ್ತೆ ಅವಳ ಪರಿಸ್ಥಿತಿ ನಾ ಕೂಡ ಅರ್ಥ ಮಾಡ್ಕೋತಾನೆ. ಜೊತೆಗೆ ಯಾರಿದ್ದಾರೆ ಅಂತ ಕೇಳ್ದೆ?
ಸೀತಾ,,, ಖುಷಿ ಇದ್ದಾಳೆ
,,, ನಾನು ಸ್ಪೀಕರ್ ಆನ್ ಮಾಡು ಅಂತ ಹೇಳ್ದೆ
ಸೀತಾ ಮೊಬೈಲ್ ಸ್ಪೀಕರ್ ಆನ್ ಮಾಡಿ, ಖುಷಿ ಮುಂದೆ ಇಡ್ತಾಳೆ.
ಖುಷಿ ಏನು ಅರ್ಥ ಹಾಗ್ದೆ ಮೊಬೈಲ್ ಕಡೆ ನೋಡಿ ಸೀತಾ ಕಡೆ ನೋಡ್ತಾಳೆ.
ನಾನು ಲೇ ಡೆಲ್ಲಿ ಸ್ಪೀಕರ್, ಯಾಕೆ ಏನು ಅಂತ ಪ್ರಶ್ನೆ ಮಾಡದೇ ನಾನ್ ಹೇಳಿದ್ದನ್ನ ಸರಿಯಾಗಿ ಕೇಳಿಸ್ಕೊ ಅಂತ ಹೇಳ್ದೆ
ಸೀತಾ ಮಹಿ ಮಾತಿಗೆ ನಕ್ಕರೆ, ಖುಷಿ ಕೋಪದಿಂದ ಯಾವನೋ ನೀನು ಅಂತಾಳೆ.
ನಾನು,, ನಿನ್ನ ಗಂಡ ಅನ್ಕೋ,
ಸೀತಾ ಮತ್ತೆ ನಕ್ಕರೆ
ಖುಷಿ ಕೋಪದಿಂದ ಏನು ಗಂಡ ನಾ ಲೋ ನಿನ್ನ?
ನಾನು,,,ನೋಡು ನಿನ್ನ ಹತ್ತಿರ ಜಗಳ ಮಾಡೋಕೆ ನನಗೆ ಟೈಮ್ ಇಲ್ಲಾ, ನಾನ್ ಬರೋದಕ್ಕೆ ಇನ್ನು 2 3 ಡೇಸ್ ಆಗುತ್ತೆ, ಅಲ್ಲಿವರೆಗೂ ಸೀತಾ ಜವಾಬ್ದಾರಿ ನಿಂದೆ, ಅವಳ ಪರಿಸ್ಥಿತಿ ಏನು ಅಂತ ನನಗೆ ಅರ್ಥ ಆಗುತ್ತೆ, ನಾನ್ ಬರೋ ಅಷ್ಟೋತ್ತಿಗೆ ಅವಳು ನಗ್ತಾ ಸಂತೋಷ ವಾಗಿ ಇರೋಹಾಗೆ ನೋಡ್ಕೋಬೇಕು, ಇಲ್ಲಾ ಆಗಲ್ಲಾ ಅಂತ ಅಂದ್ರೆ, ಲೈಫ್ ಅಲ್ಲಿ ಏನಕ್ಕಪ್ಪ ಇವನನ್ನ ಎದುರು ಹಾಕೊಂಡೆ ಅಂತ ಎವ್ರಿ ಸೆಕೆಂಡ್ ಫೀಲ್ ಆಗೋ ಹಾಗೇ ಮಾಡ್ತೀನಿ, ನೀನು ಅನ್ಕೋಬೋದು ನನಗೆ ಎಲ್ಲರೂ ಇದ್ದಾರೆ ಇವನೇನು ಮಾಡ್ತಾನೆ ಅಂತ, ತಪ್ಪಲ್ಲ. ಅದ್ರೆ ನಿನಗೆ ಯಾರು ನಿನ್ನ ಸಪೋರ್ಟ್ ಗೆ ಇರ್ತಾರೆ ಅಂತ ಅನ್ಕೊಂಡು ಇದ್ದಿಯೊ ಅವರನೆಲ್ಲ ಬುಗರಿ ಆಡಿಸಿದ ಹಾಗೇ ಆಡಿಸ್ತೀನಿ, ಡೌಟ್ ಇದ್ರೆ ನಿನ್ನ ಎದುರುಗಡೆ ಇರೋವಳನ್ನ ಕೇಳು ಹೇಳ್ತಾಳೇ ನನ್ನ ಬಗ್ಗೆ, ಸೋ ಭಯ ಭಕ್ತಿ ಯಿಂದ ಇದ್ದು ಸೀತಾ ನಾ ಚೆನ್ನಾಗಿ ನೋಡ್ಕೋ, ನಾನ್ ಬರೋವರೆಗೂ ಅ ಮನೇಲಿ ಅವಳ ಜೊತೆಗೆ ಇರಬೇಕು, ಅರ್ಥ ಆಯ್ತಾ, ಅಂತ ಹೇಳಿ ಕಾಲ್ ಕಟ್ ಮಾಡಿದೆ.
ಕಾಲ್ ಕಟ್ ಮಾಡಿದ ಮೇಲೆ ಖುಷಿ ಕೋಪದಿಂದ ಸೀತಾ ಕಡೆ ನೋಡಿ ಯಾರೇ ಇವನು, ಬಾಯಿಗೆ ಬಂದ ಹಾಗೇ ಮಾತಾಡ್ತಾ ಇದ್ದಾನೆ ಅಂತ ಕೇಳಿದ್ಲು.
ಸೀತಾ ನಗ್ತಾ ಮಹಿ ಅಂತ ಹೇಳಿದ್ಲು.
ಖುಷಿ ಏನು ಮಹಿ ನಾ, ಅವನನ್ನ ಬರ್ಲಿ ನೋಡ್ಕೋತೀನಿ, ನನಗೆ ಗಂಡ ಅಂತಾನಾ, ನಮ್ಮವರನೆಲ್ಲ ಬುಗರಿ ಆಡಿಸಿದ ಹಾಗೇ ಆಡಿಸ್ತಾನ, ಡೆಲ್ಲಿ ಸ್ಪೀಕರ್ ಅಂತಾನಾ, ಅವನನ್ನ ಅಂತ ಕೋಪದಿಂದ ಏನೋ ಹೇಳೋವಾಗ.
ಸೀತಾ,, ಖುಷಿ ಹಸಿವಾಗತ ಇದೆ, ಊಟ ಮಾಡೋಣ್ವಾ ಅಂತ ಕೇಳ್ತಾಳೆ..
ಖುಷಿ ಅವಳ ಮಾತಿಗೆ ಕೋಪ ನಾ ಕಂಟ್ರೋಲ್ ಮಾಡ್ಕೊಂಡ್ ಬಾ ಹೋಗಣ ಅಂತ ಹೇಳಿ ಅವಳನ್ನ ಕೆಳಗೆ ಕರ್ಕೊಂಡು ಬರ್ತಾಳೆ.
ಸೀತಾ ಬರೋದನ್ನ ನೋಡಿ ತಾತ ಅವಳ ಕಡೆ ನೋಡ್ತಾನೆ, ಅವಳ ಮುಖದಲ್ಲಿ ಸಂತೋಷ ನೋಡಿ ಅವರು ಖುಷಿ ಪಡ್ತಾ, ಎದ್ದು ಅಮ್ಮ ಖುಷಿ ನಿನಗೆ ಎಷ್ಟು ಥ್ಯಾಂಕ್ಸ್ ಹೇಳಿದ್ರು ಕಮ್ಮಿನೆ, ಅಂತ ಏನೋ ಹೇಳೋವಾಗ.
ಖುಷಿ ತಾತ ಆಮೇಲೆ ಮಾತಾಡೋಣ ಅವಳಿಗೆ ಹಸಿವಗ್ತಾ ಇದೆ ಅಂತೇ,.
ತಾತ ಹೌದ ಇರು ತಿಂಡಿ ಕೊಡೋಕೆ ಹೇಳ್ತಿನಿ ಅಂತ ಹೇಳಿ ಅಡುಗೆ ಮನೆ ಕಡೆ ಹೋಗ್ತಾರೆ ...
@@@@@@@@@@@@@@@@@@@@@@@@@@